Asianet Suvarna News Asianet Suvarna News
breaking news image

ಪಿಯುಸಿಯಲ್ಲೊಂದು ಲವ್..ಡಿಗ್ರಿಯಲ್ಲಿ ಮತ್ತೊಂದು ಲವ್..!ಮನೆಯಲ್ಲಿ ಹೆಂಡತಿ ಇದ್ದರೂ, ಪ್ರೇಯಸಿ ಜೊತೆ ಸುತ್ತಾಟ..!

ಇಬ್ಬರ ಜೊತೆ ಸಂಸಾರ.. ಸತ್ತಿದ್ದು ಯಾರ ಜೊತೆಗೆ..?
ಮತ್ತೊಂದು ಲವ್ ವಿಚಾರ ಹೆಂಡತಿಗೆ ಗೊತ್ತಾಗಿಬಿಟ್ಟಿತ್ತು..!
ಪ್ರೀತಿಸಿ ಮದುವೆಯಾದರೂ ಮತ್ತೊಬ್ಬಳ ಹಿಂದೆ ಬಿದ್ದಿದ್ದ..!

ಅವರಿಬ್ಬರು ಒಂದೇ ಕಾಲೇಜಿನ ವಿದ್ಯಾರ್ಥಿಗಳು. ಇಬ್ಬರೂ ಡೀಪ್ ಲವ್‌ನಲ್ಲಿ(Love) ಬಿದ್ದಿದ್ರು. ಆದ್ರೆ ಅವರ ಪ್ರೀತಿಗೆ ಏನಂಥ ಕರಿಯಬೇಕು ಅನ್ನೋದೇ ಅರ್ಥವಾಗ್ತಿಲ್ಲ. ಕಾರಣ ಅದಾಗಲೇ ಅವನು ಒಬ್ಬಳನ್ನ ಪ್ರೀತಿಸಿ ಮದುವೆಯಾಗಿದ್ದ. ಪಿಯುಸಿಯಲ್ಲಿ ಓದುತ್ತಿರುವಾಗ ಸಹಪಾಟಿಯನ್ನೇ ಪ್ರೀತಿಸಿ ಆತ ಮದುವಾಯಾಗಿದ್ದ. ಆದ್ರೆ ಮದುವೆ(Marriage) ನಂತರ ಡಿಗ್ರಿಗೆ ಸೇರಿದ ಮೇಲೆ ಮತ್ತೊಬ್ಬಳ ಹಿಂದೆ ಬಿದ್ದಿದ್ದ. ಇನ್ನೂ ಆಕೆಯೋ ಆತನಿಗೆ ಮದುವೆಯಾಗಿರೋ ವಿಚಾರ ಗೊತ್ತಿದ್ರೂ ಅವನ ಜೊತೆ ಲವ್ನಲ್ಲಿ ಬಿದ್ದಿದ್ಲು. ಇನ್ನೂ ಈ ಪ್ರೀತಿಯ ಆಯಸ್ಸು ಕೂಡ ಡಿಗ್ರಿ ಮುಗಿಯುವ ಹೊತ್ತಿಗೆ ಅಂತ್ಯವಾಗಿತ್ತು. ಮದುವೆಯಾಗಿದ್ದ ಈ ಶ್ರಿಕಾಂತ್(Young man) ತೆಪ್ಪಗೆ ಸಂಸಾರ ಮಾಡ್ಕೊಂಡು, ದುಡ್ಕೊಂಡು‌‌. ಓದ್ಕೊಂಡ್ ಹೋಗಿದ್ದಿದ್ರೆ ಇವತ್ತು ಆರಾಮಾಗಿ ಇರ್ತಿದ್ದ. ಆದ್ರೆ ಈ ಲವ್ವು ಗಿವ್ವು ಅಂತ ಹೋಗಿ ಈ ರೋಮಿಯೋ ಇಬ್ಬರ ಹೆಣ್ಣು ಮಕ್ಕಳ ಬದುಕನ್ನ ನಾಶ ಮಾಡಿ ತಾನು ಪ್ರಾಣ ಬಿಟ್ಟಿದ್ದು ಮಾತ್ರ ದುರಂತ. ಅವನು ವಿದ್ಯಾಭ್ಯಾಸಕ್ಕಾಗಿ ದೂರದ ಅಸ್ಸಾಂನಿಂದ ಬೆಂಗಳೂರಿಗೆ(Bengaluru) ಬಂದ್ದಿದ್ದ. ಕಾಲೇಜಿನಿಂದ ಹೊರ ಬಂದ್ರೆ ಸಾಕು ಎಣ್ಣೇಲಿ ತೇಲಾಡ್ತಿದ್ದ. ಬರ್ತಾ ಬರ್ತಾ ಎಣ್ಣೆ ಹಾಕೊಂಡೇ ಕಾಲೇಜಿಗೆ ಹೋಗೋಕೆ ಶುರು ಮಾಡಿದ್ದ.  ಇವತ್ತು ಎಣ್ಣೆ ಹಾಕೊಂಡೆ  ಕಾಲೇಜು ಆ್ಯನ್ಯುವಲ್ ಡೇಗೆ  ಹೋಗಿದ್ದವ್ನು ನೆತ್ತರು ಹರಿಸಿದ್ದಾನೆ. ಸಂಸ್ಕಾರ ಕಲಿಯಬೇಕಿದ್ದ ಕಾಲೇಜಿನಲ್ಲೇ ಕೊಲೆ ಮಾಡಿ ಅಂದರ್ ಆಗಿದ್ದಾನೆ.

ಇದನ್ನೂ ವೀಕ್ಷಿಸಿ:  ಸಿಬಿಐ ತನಿಖೆಗೆ ಬಿಜೆಪಿ ಪಟ್ಟು..ಸಿದ್ದರಾಮಯ್ಯ ಹೇಳಿದ 60 ಕೋಟಿಯ ರಹಸ್ಯವೇನು ?

Video Top Stories