
ಹಲವು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡುತ್ತಾ ಎನ್‌ಡಿಎ..? ಹಿಂದಿ ರಾಜ್ಯಗಳಲ್ಲಿ ಮತ್ತೊಮ್ಮೆ ಮೋದಿ ಮೋಡಿ ಮಾಡ್ತಾರಾ..?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಲವು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು CNN News 18 Survey ಹೇಳುತ್ತಿದೆ.
ಹಲವು ರಾಜ್ಯಗಳಲ್ಲಿ ಬಿಜೆಪಿ ಮತ್ತು ಎನ್‌ಡಿಎ ಕ್ಲೀನ್ ಸ್ವೀಪ್ ಮಾಡಲಿದೆ ಎಂದು CNN News 18 Survey ಹೇಳುತ್ತಿದೆ. ದೆಹಲಿ, ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲ್(Arvind Kejriwal) ಆಟ ನಡೆಯಲ್ಲ ಎನ್ನಲಾಗ್ತಿದೆ. ದೀದಿ ನಾಡಲ್ಲಿ ಮೋದಿ(Narendra Modi) ಮೇನಿಯಾ ನಡೆಯಲಿದೆ ಸರ್ವೆ(Survey) ಭವಿಷ್ಯ ನುಡಿದಿದೆ. ಮೋದಿ ಹ್ಯಾಟ್ರಿಕ್ ಗೆಲುವು ಪಕ್ಕಾ ಎಂದು ಈ ಸಮೀಕ್ಷೆ ಹೇಳುತ್ತಿದೆ. ಎಲೆಕ್ಷನ್ ಘೋಷಣೆ ಹೊಸ್ತಿಲಲ್ಲಿ ಈ ಸಮೀಕ್ಷೆ ಹೊರಬಂದಿದೆ. ಸಿಎನ್‌ಎನ್ ಸಮೀಕ್ಷೆ(NN News 18 Survey ) ಪ್ರಕಾರ, ಗುಜರಾತ್‌ನಲ್ಲಿ ಬಿಜೆಪಿ(BJP) ಎಲ್ಲಾ ಸ್ಥಾನಗಳನ್ನು ಗೆಲ್ಲಲಿದೆಯಂತೆ. ರಾಜಸ್ಥಾನದಲ್ಲಿ 25 ಸ್ಥಾನ, ಉತ್ತರಪ್ರದೇಶ- 77 ಸ್ಥಾನ ಗೆಲ್ಲಲಿದೆಯಂತೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ 25 ಸ್ಥಾನ ಬರಲಿದೆಯಂತೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: Loksabha: ಟಾರ್ಗೆಟ್ 25+ V/S ಟಾರ್ಗೆಟ್ 20+..ಯಾರ ಕೈ ಮೇಲಾಗುತ್ತೆ? ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವರ್ಕೌಟ್ ಆಗುತ್ತಾ?