Bjp Internal Survey: ಸರ್ವೆ ಆಧಾರದ ಮೇಲೆ ಹಂಚಿಕೆಯಾಗುತ್ತಾ ಟಿಕೆಟ್..? ಆಂತರಿಕ ಸರ್ವೆಯಲ್ಲಿ ಕೇಳಿದ್ದೇನು..?

ದಿನದಿಂದ ದಿನ ಹತ್ತಿರವಾಗ್ತಿದೆ ಲೋಕಸಭಾ ಚುನಾವಣೆ 
ಪಕ್ಷಗಳಲ್ಲಿ ಜೋರಾಯ್ತು ಅಭ್ಯರ್ಥಿ ಆಯ್ಕೆ ಕಸರತ್ತು
ಮೂರು ಪಕ್ಷಗಳಲ್ಲೂ ಶುರು ಆಂತರಿಕ ಸರ್ವೆ ಕಾರ್ಯ

Share this Video
  • FB
  • Linkdin
  • Whatsapp

ಶತಾಯಗತಯಾ ಗೆಲ್ಲಲೇ ಬೇಕೆಂದಿರುವ ಬಿಜೆಪಿ(BJP) ಆಂತರಿಕ ಸರ್ವೆ ನಡೆಸಿದೆ. ಇದರಲ್ಲಿ ಕೆಲವು ಅಚ್ಚರಿಯ ಅಂಶ ಬೆಳಕಿಗೆ ಬಂದಿದ್ದು, ಗೊಂದಲದ ಕ್ಷೇತ್ರಗಳಲ್ಲಿ ಹಳೇ ಮುಖಗಳಿಗೆ ಮಣೆ ಹಾಕೋಕೆ ಬಿಜೆಪಿ ಸಿದ್ಧವಾಗಿದೆಯಂತೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಗೊಂದಲ ಮುಂದುವರೆದಿದೆ. ಗೊಂದಲದ ಕ್ಷೇತ್ರಗಳಲ್ಲಿ ಹಳೆ ಮುಖಕ್ಕೆ ಮತ್ತೆ ಮಣೆ ಹಾಕುವ ಸಾಧ್ಯತೆ ಇದೆ. 10 ರಿಂದ 12 ಕ್ಷೇತ್ರಗಳಲ್ಲಿ ಆಸಕ್ತಿದಾಯಕ ವಿಚಾರ ಬೆಳಕಿಗೆ ಬಂದಿದೆ. ನಾಯಕರನ್ನೂ ಸರ್ವೆ ರಿಪೋರ್ಟ್(Survey Report) ಅಚ್ಚರಿಗೆ ದೂಡಿದೆ. ಹೀಗಾಗಿ ಸರ್ವೆ ಆಧಾರದ ಮೇಲೆ ಟಿಕೆಟ್‌(Ticket) ಹಂಚಿಕೆಯಾಗುವ ಸಾಧ್ಯತೆ ಇದೆ. ಪ್ರತಿ ಕ್ಷೇತ್ರದಲ್ಲಿ ತಂಡ ಮಾಹಿತಿ ಸಂಗ್ರಹ ಮಾಡಿದೆ. ಸುಮಾರು 10 ರಿಂದ 12 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಆದರೆ ಅಭ್ಯರ್ಥಿ ಬದಲಾವಣೆಗೆ ಜನ ಮನಸ್ಸು ಮಾಡಬೇಕಾಗಿದೆ. ಕನಿಷ್ಠ 12 ಹಾಲಿ ಸಂಸದರಿಗೆ ಟಿಕೆಟ್ ನೀಡಬಾರದು ಎಂದು ಉಲ್ಲೇಖ ಮಾಡಲಾಗಿದೆ. ಕೆಲವೆಡೆ ಅಭ್ಯರ್ಥಿಗಳ ಬಗ್ಗೆ ಸಾರ್ವಜನಿಕರು, ಕಾರ್ಯಕರ್ತರ ನಡುವೆ ಅಪಸ್ವರ ಕೇಳಿಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Mandya: ಮೋದಿ, ಶಾ, ನಡ್ಡಾ ಮೂವರಿಂದಲೂ ಒಂದೇ ನಿರ್ಧಾರ: ಜೆಡಿಎಸ್ ಮನವೊಲಿಸಲು ಬಿಜೆಪಿ ಹೈಕಮಾಂಡ್ ಚಿಂತನೆ !

Related Video