Asianet Suvarna News Asianet Suvarna News

Mandya: ಮೋದಿ, ಶಾ, ನಡ್ಡಾ ಮೂವರಿಂದಲೂ ಒಂದೇ ನಿರ್ಧಾರ: ಜೆಡಿಎಸ್ ಮನವೊಲಿಸಲು ಬಿಜೆಪಿ ಹೈಕಮಾಂಡ್ ಚಿಂತನೆ !

ಮಂಡ್ಯ ಟಿಕೆಟ್ ಬಗ್ಗೆ ಬಿಜೆಪಿ ಹೈಕಮಾಂಡ್ ನಿರ್ಧಾರ..!
ಸುಮಲತಾರನ್ನೇ ಕಣಕ್ಕಿಳಿಸಲು ಬಿಜೆಪಿ ವರಿಷ್ಠರ ಚಿಂತನೆ
ಮಂಡ್ಯಕ್ಕಾಗಿ ಹೋರಾಟ ಮುಂದುವರೆಸಿರುವ ಜೆಡಿಎಸ್

First Published Feb 20, 2024, 11:01 AM IST | Last Updated Feb 20, 2024, 11:01 AM IST

ಚುನಾವಣೆ ಬಂತು ಅಂದ್ರೆ ಮಂಡ್ಯ(Mandya) ಹೈವೋಲ್ಟೆಜ್ ರಣಕಣವಾಗುತ್ತೆ. ಮೊನ್ನೆಯಷ್ಟೆ ಸುಮಲತಾ(Sumalatha) ಮಂಡ್ಯ ಬಿಡೋ ಮಾತೆ ಇಲ್ಲ ಅಂತ ಖಡಕ್ ಸಂದೇಶ ನೀಡಿದ್ರು. ಇದರ ಬೆನ್ನಲ್ಲೇ ಬಿಜೆಪಿಯಿಂದ(BJP) ಸುಮಲತಾಗೆ ಮಂಡ್ಯ ಟಿಕೆಟ್(Ticket) ಪಕ್ಕಾ ಅನ್ನೋ ಮಾತು ಬಲವಾಗಿದ್ದು, ಜೆಡಿಎಸ್ ಏನ್ ಮಾಡುತ್ತೆ ಅನ್ನೋ ಪ್ರಶ್ನೆ ಎದುರಾಗಿದೆ. ಈಗಾಗಲೇ ದೇವೇಗೌಡರಿಗೂ(Devegowda) ಸೂಚ್ಯವಾಗಿ ಈ ಬಗ್ಗೆ ಬಿಜೆಪಿ ತಿಳಿಸಿದೆ. ಮಂಡ್ಯ ಟಿಕೆಟ್ ಬಿಟ್ಟುಕೊಡದಿರಲು ಬಿಜೆಪಿ ನಾಯಕರ ಸ್ಕೆಚ್ ಹಾಗಿದ್ದು, ಶೀಘ್ರದಲ್ಲೇ ಸೀಟು ಹಂಚಿಕೆ ವೇಳೆ ಬಿಜೆಪಿಯಿಂದ ಈ ವಿಚಾರ ಪ್ರಸ್ತಾಪ ಮಾಡಲಾಗುವುದು. ಇತ್ತೀಚೆಗೆ ಬಿಜೆಪಿ ಹೈಕಮಾಂಡ್‌ನನ್ನು ಸಂಸದೆ ಸುಮಲತಾ ಭೇಟಿ ಮಾಡಿದ್ದರು. ನಡ್ಡಾ, ಅಮಿತ್ ಶಾ, ಮೋದಿ ಭೇಟಿಯಾಗಿ ಮಂಡ್ಯ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಸದ್ಯ ಈ ಮೂವರು ನಾಯಕರು ಮಂಡ್ಯ ಟಿಕೆಟ್ ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ‘ದೋಸ್ತಿ’ಗಳಿಗೆ ಖಡಕ್ ಸಂದೇಶ ಕೊಟ್ರಾ ರೆಬೆಲ್ ಲೇಡಿ ?: ‘ಮಂಡ್ಯನ ಎಂದೆಂದಿಗೂ ಬಿಡಲ್ಲ’ ಎಂದು ಸುಮಲತಾ ಶಪಥ !

Video Top Stories