Asianet Suvarna News Asianet Suvarna News

ವಿಧಾನಸಭೆ ಸೋತವರಿಗೆ ಲೋಕ ಗೆಲ್ಲುವ ಆಸೆ: ನಾನು ಟಿಕೆಟ್ ಆಕಾಂಕ್ಷಿ ಎಂದ ಬಿಜೆಪಿ ಮಾಜಿ ಶಾಸಕ

ವಿಧಾನಸಭೆ ಸೋತ ನಾಯಕರು ಈಗ ಲೋಕಸಮರ ಗೆಲ್ಲೋಕೆ ಸಜ್ಜಾಗ್ತಿದ್ದಾರೆ. ನಮಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಸಂದೇಶ ರವಾನಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ ಕಸರತ್ತು ಶುರುಮಾಡಿದ್ರೆ..ಇತ್ತ ವೀಣಾ ಕಾಶಪ್ಪನವರು ನನಗೆ ಟಿಕೆಟ್ ಸಿಗುತ್ತೆ ಅಂತಾ ವಿಶ್ವಾಸದಲ್ಲಿದ್ದಾರೆ.
 

ವಿಧಾನಸಭೆಯಲ್ಲಿ ಸೋತ ನಾಯಕರು ಈಗ ಲೋಕಸಮರಕ್ಕೆ ಸಜ್ಜಾಗುತ್ತಿದ್ದಾರೆ. ಅಸೆಂಬ್ಲಿಯಲ್ಲಿ ಹೋದ ಮಾನವನ್ನ ಹೇಗಾದ್ರೂ ಮಾಡಿ ಲೋಕಸಭೆಯಲ್ಲಿ ಪಡಿಬೇಕು ಅಂತಾ ಅಖಾಡಕ್ಕೆ ಧುಮುಕಲು ಸಜ್ಜಾಗ್ತಿದ್ದಾರೆ. ಅದರಲ್ಲೂ ಬಿಜೆಪಿಯಲ್ಲಿ(BJP) ಸೋತವರೇ ಲೋಕಸಭೆ(Loksabha) ಮೇಲೆ ಕಣ್ಣಿಟ್ಟಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿ ಅಂತಾ ದೊಡ್ಡನಗೌಡ ಪಾಟೀಲ ಸಂದೇಶ ರವಾನಿಸಿದ್ದಾರೆ. ಬಾಗಲಕೋಟೆಯ(Bagalkot) ಹನುಗುಂದ ವಿಧಾನಸಭೆ ಎಲೆಕ್ಷನ್ ವೇಳೆ ದೊಡ್ಡನಗೌಡ ಪಾಟೀಲ, ವಿಜಯನಂದ ಕಾಶಪ್ಪನವರ್ ವಿರುದ್ಧ ದೊಡ್ಡ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿಯ ದೊಡ್ಡನಗೌಡ ಪಾಟೀಲ(Doddanaagowda Patil) ಕೊನೆಕ್ಷಣದಲ್ಲಿ ಕಾಶಪ್ಪನವರ್ ವಿರುದ್ಧ ಸೋತ್ರು. ಅಷ್ಟೇ ಅಲ್ಲ ಬಾಗಲಕೋಟೆಯ 7 ಕ್ಷೇತ್ರಗಳಲ್ಲಿ 5ರಲ್ಲಿ ಕಾಂಗ್ರೆಸ್ ಜಯಬೇರಿ ಕೂಡ ದಾಖಲಿಸಿತ್ತು. ಆದ್ರೆ ವಿಧಾನಸಭೆಯಲ್ಲಿ ನನ್ನ ಕೊನೇ ಎಲೆಕ್ಷನ್ ಎಂದ ಪಾಟೀಲ ಈಗ ಲೋಕಸಭೆಗೆ ಬಿಜೆಪಿಯಿಂದ ನಾನು ಕೂಡ ಪ್ರಬಲ ಆಕಾಂಕ್ಷಿ ಎಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.ಇದನ್ನೇ ಅಸ್ತ್ರವಾಗಿಸಿಕೊಂಡು ದೊಡ್ಡನಗೌಡ ಪಾಟೀಲ ರಣತಂತ್ರ ಹೆಣೆಯುತ್ತಿದ್ದಾರೆ. ಆದ್ರೆ ವೀಣಾ ಕಾಶಪ್ಪನವರ್ ಮಾತ್ರ ಯಾರೇ ನಿಂತ್ರೂ ಕಾಂಗ್ರೆಸ್‌ನದ್ದೇ ಗೆಲುವು ಅನ್ನೋದರ ಜೊತೆಗೆ ನನಗೆ ಟಿಕೆಟ್ ಸಿಗುತ್ತೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಪವನ್ ಕಲ್ಯಾಣ್, ಜೂ.ಎನ್‌ಟಿಆರ್ ಜೊತೆಯಾದ್ರಾ? ತಾತನ ಪಕ್ಷಕ್ಕೆ ಸಾರಥಿ ಆಗ್ತಾರಾ ಮೊಮ್ಮಗ?