Asianet Suvarna News Asianet Suvarna News

ಪವನ್ ಕಲ್ಯಾಣ್, ಜೂ.ಎನ್‌ಟಿಆರ್ ಜೊತೆಯಾದ್ರಾ? ತಾತನ ಪಕ್ಷಕ್ಕೆ ಸಾರಥಿ ಆಗ್ತಾರಾ ಮೊಮ್ಮಗ?

ಆಂಧ್ರಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಸೋಲಿಸಲು ನಟ ಪವನ್ ಕಲ್ಯಾಣ್, ನಟ ಜೂ.ಎನ್‌ಟಿಆರ್ ಒಂದಾಗ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ.
 

First Published Oct 1, 2023, 10:58 AM IST | Last Updated Oct 1, 2023, 10:58 AM IST

ಪವನ್‌ ಕಲ್ಯಾಣ್‌ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ (Jr. NTR) ಇಬ್ಬರೂ ಒಂದಾಗಿದ್ದಾರೆ. ಅದು ಸಿನಿಮಾಗಾಗಿ ಅಲ್ಲ, ರಾಜಕೀಯಕ್ಕಾಗಿ. ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ(Jagan Mohan Reddy) ಅವರನ್ನು ಸೋಲಿಸಲು ಇಬ್ಬರೂ ಒಂದಾಗ್ತಿದ್ದಾರಂತೆ. ಚಂದ್ರಬಾಬು ನಾಯ್ಡು ಪಕ್ಷದ ಮುಂದಿನ ವಾರಸುದಾರ ಇವರೇ ಆಗ್ತಾರಂತೆ. ಸದ್ಯ ಇಬ್ಬರೂ ರಾಜಕೀಯವಾಗಿ ಒಂದಾಗಿದ್ದಾರೆ. ಹಾಗೆ ಸಿನಿಮಾದಲ್ಲೂ ಒಂದಾಗಲಿ ಎಂದು ಇಬ್ಬರು ನಟರ ಫ್ಯಾನ್ಸ್‌ ಹೇಳುತ್ತಿದ್ದಾರೆ. ಅಲ್ಲದೇ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಪವನ್‌ ಕಲ್ಯಾಣ್‌(Pawan Kalyan) ಮೈತ್ರಿ ಮಾಡಿಕೊಳ್ಲಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದಿನ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಸೋಲನ್ನು ಖಚಿತಪಡಿಸಿಕೊಳ್ಳಲು ಆಡಳಿತ ವಿರೋಧಿ ಮತಗಳಲ್ಲಿ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಈಗಾಗಲೇ ಘೋಷಿಸಿದ್ದರು. 

ಇದನ್ನೂ ವೀಕ್ಷಿಸಿ:  ಟೈಗರ್‌ ಶ್ರಾಫ್‌ 'ಗಣಪತ್‌' ಟೀಸರ್‌ ರಿಲೀಸ್‌: ಶಿವಣ್ಣನ ವಾಯ್ಸ್‌ನಲ್ಲಿ ಕನ್ನಡದಲ್ಲಿ ಈ ಸಿನಿಮಾ ಸೂಪರ್..!