ಬಿಜೆಪಿ ವಿಪಕ್ಷ ಸ್ಥಾನಕ್ಕೆ ಲಿಂಗಾಯಿತ ನಾಯಕ, ಒಕ್ಕಲಿಗ ಸಮುದಾಯಕ್ಕೆ ಅಧ್ಯಕ್ಷ; ನಾಳೆ ಘೋಷಣೆ?

ಬಿಜೆಪಿ ಇದುವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಇತ್ತ ರಾಜ್ಯಾಧ್ಯಕ್ಷರ ಆಯ್ಕೆಯೂ ನಡೆದಿಲ್ಲ. ಕಳೆದ ವಾರ ವೀಕ್ಷರರು ಆಗಮಿಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಘೋಷಣೆ ನಾಳೆ ನಡೆಯುವ ಸಾಧ್ಯತೆ ಇದೆ. ಆದರೆ ಎರಡು ಪ್ರಬಲ ಸಮುದಾಯಕ್ಕೆ ಸ್ಥಾನ ನೀಡುವುದು ದಟ್ಟವಾಗಿದೆ

Share this Video
  • FB
  • Linkdin
  • Whatsapp

ಬೆಂಗಳೂರು(ಜು.08) ಚುನಾವಣೆ ಫಲಿತಾಂಶ ಘೋಷಣೆಯಾಗಿ, ಇದೀಗ ವಿಧಾನಸಭಾ ಅಧಿವೇಶನ ಕೂಡ ಆರಂಭಗೊಂಡರೂ ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ. ಬಿಜೆಪಿ ಹೈಕಮಾಂಡ್ ನಾಳೆ ವಿಪಕ್ಷ ನಾಯಕನ ಜೊತೆಗೆ ರಾಜ್ಯಾಧ್ಯಕ್ಷರ ಆಯ್ಕೆಯೂ ನಡೆಯವು ಸಾಧ್ಯತೆ ಇದೆ. ಇದೀಗ ವಿಪಕ್ಷ ನಾಯಕನ ಪಟ್ಟವನ್ನು ಲಿಂಗಾಯಿತ ಸಮುದಾಯಕ್ಕೆ ನೀಡಲು ಕಸರತ್ತು ನಡೆದಿದೆ. ಇತ್ತ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡುವ ಸಾಧ್ಯತೆ ದಟ್ಟವಾಗಿದೆ.

Related Video