ಗೃಹಲಕ್ಷ್ಮೀ ಯೋಜನೆ ಅರ್ಜಿ ನಮೂನೆ ಬಿಡುಗಡೆ: ಅರ್ಜಿಯಲ್ಲಿ ಏನಿದೆ ? ಕೊನೆಯ ದಿನಾಂಕ ಯಾವಾಗ ?

ಗೃಹಲಕ್ಷ್ಮೀ ಯೋಜನೆಯ ಅರ್ಜಿಯಲ್ಲಿ ಮನೆಯ ಯಜಮಾನಿ ಪತಿಯ ದಾಖಲೆಗಳನ್ನು ಕೇಳಲಾಗಿದೆ. ಪತಿಯ ಆಧಾರ್ ಕಾರ್ಡ್ ವೋಟರ್ ಐಡಿ ದಾಖಲೆ ಕೂಡ ಅರ್ಜಿ ಸಲ್ಲಿಕೆ ವೇಳೆ ಅಗತ್ಯವಾಗಿದೆ.
 

First Published Jun 8, 2023, 11:58 AM IST | Last Updated Jun 8, 2023, 11:58 AM IST

ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆಯನ್ನು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿದೆ. ಅರ್ಜಿಯಲ್ಲಿ ಜಾತಿ ನಮೂನೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಸಿಎಂ, ಡಿಸಿಎಂ, ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಸೇರಿಂತೆ ಮೂವರ ಭಾವಚಿತ್ರವಿರುವ ‘ಗೃಹಲಕ್ಷ್ಮೀ’ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದೆ. ಆಧಾರ್ ಗೆ ಲಿಂಕ್ ಹೊಂದಿರುವ ಫೋನ್ ನಂಬರ್ ಕಡ್ಡಾಯವಾಗಿ ನಮೂದು ಮಾಡಬೇಕಾಗಿದ್ದು, ಅರ್ಜಿಯಲ್ಲಿ ಪತಿಯ ಆಧಾರ್ ಕಾರ್ಡ್, ವೋಟರ್ ಐಡಿ ಕೇಳಲಾಗಿದೆ. ಜೂನ್‌ 15 ರಿಂದ ಜುಲೈ 15 ರತನಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಲ್ಲದೇ ನಾನು ಮತ್ತು ನನ್ನ ಪತಿ ಜಿಎಸ್‌ಟಿ ಪಾವತಿದಾರರು ಅಲ್ಲ ಎಂದು ಘೋಷಣೆ ಸಹ ಮಾಡಬೇಕಾಗಿದೆ. ಅರ್ಜಿದಾದರೇ ಯಜಮಾನಿ ಯಾರು ಎಂದು ಘೋಷಣೆ ಮಾಡಿ ಸಲ್ಲಿಸಬೇಕಾಗಿದೆ. 

ಇದನ್ನೂ ವೀಕ್ಷಿಸಿ: ರಾಕಿ ಮೇಲೆ ಕಣ್ಣು ಹಾಕಿದ ಲೈಗರ್ ಬ್ಯೂಟಿ: ಯಶ್‌ ಜೊತೆ ಸಿನಿಮಾ ಮಾಡೋ ಆಸೆ ಎಂದ ಮಿಲ್ಕಿ ಅನನ್ಯಾ!

Video Top Stories