ಜೆಡಿಎಸ್‌ ಕಾರ್ಯಕರ್ತರ ಜತೆ ಭೈರತಿ ಸುರೇಶ್‌ ವಾಗ್ವಾದ: ಕ್ಯೂ ತಪ್ಪಿಸಿ ಬಂದ ಬಿಜೆಪಿ ಅಭ್ಯರ್ಥಿಗೆ ಮತದಾರರ ತರಾಟೆ

ಜೆಡಿಎಸ್‌ ಕಾರ್ಯಕರ್ತರ ಜೊತೆ ಭೈರತಿ ಸುರೇಶ್‌ ವಾಗ್ವಾದ
ಕ್ಯೂ ತಪ್ಪಿಸಿ ಬಂದ ಬಿಜೆಪಿ ಅಭ್ಯರ್ಥಿಗೆ ಮತದಾರರ ತರಾಟೆ
ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಕೃಷ್ಣಪ್ಪಗೆ ತರಾಟೆ

Share this Video
  • FB
  • Linkdin
  • Whatsapp

ಬೆಂಗಳೂರು: ಹೆಬ್ಬಾಳದಲ್ಲಿ ಭೈರತಿ ಸುರೇಶ್‌ ಜೆಡಿಎಸ್‌ ಕಾರ್ಯಕರ್ತರ ಜೊತೆ ವಾಗ್ವಾದ ನಡೆಸಿದ್ಧಾರೆ. ಜೆಡಿಎಸ್‌ ಕಾರ್ಯಕರ್ತರು ಮತಗಟ್ಟೆ ಬಳಿ ಮತಯಾಚಿಸುತ್ತಿದ್ದರು ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಅಲ್ಲಿಂದ ತೆರಳುವಂತೆ ಭೈರತಿ ಸುರೇಶ್‌ ಸೂಚಿಸಿದ್ದಾರೆ. ಇಂದು ಯಾರೂ ಕೂಡ ಇಂತವರಿಗೆ ಮತಹಾಕಿ ಎಂದು ಹೇಳುವಂತಿಲ್ಲ. ಇನ್ನೂ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಅವರಿಗೆ ಮತದಾರರು ಗೇರಾವ್‌ ಹಾಕಿದ್ದಾರೆ. ಕ್ಯೂ ತಪ್ಪಿಸಿ ಬಂದ ಅವರನ್ನು ಮತದಾರರು ತರಾಟೆ ತೆಗೆದುಕೊಂಡರು. ಕ್ಯೂನಲ್ಲಿ ನಿಂತುಕೊಳ್ಳಿ ಎಂದು ಕ್ಲಾಸ್‌ ತೆಗೆದುಕೊಂಡರು.

ಇದನ್ನೂ ವೀಕ್ಷಿಸಿ: ಮನೆಯಲ್ಲಿ ಉಳಿಯದೇ, ಪ್ರಜಾಪ್ರಭುತ್ವದ ಯಶಸ್ವಿಗೆ ಮತ ಹಾಕಿ: ಸಿದ್ದಗಂಗಾ ಶ್ರೀ ಕರೆ

Related Video