ಮನೆಯಲ್ಲಿ ಉಳಿಯದೇ, ಪ್ರಜಾಪ್ರಭುತ್ವದ ಯಶಸ್ವಿಗೆ ಮತ ಹಾಕಿ: ಸಿದ್ದಗಂಗಾ ಶ್ರೀ ಕರೆ

ತುಮಕೂರಿನ ಮತಗಟ್ಟೆ ಸಂಖ್ಯೆ 116ರಲ್ಲಿ ಸಿದ್ದಗಂಗಾ ಶ್ರೀ ಮತ ಚಲಾಯಿಸಿದರು. 116ರಲ್ಲಿ ಮೊದಲಿಗರಾಗಿ ಸ್ವಾಮೀಜಿಗಳು ಮತ ಹಾಕಿದರು. 

Share this Video
  • FB
  • Linkdin
  • Whatsapp

ತುಮಕೂರು: ಇಂದು ರಾಜ್ಯಾದ್ಯಂತ ಮತದಾನ ನಡೆಯುತ್ತಿದ್ದು, ಸಿದ್ದಗಂಗಾ ಶ್ರೀಗಳು ತುಮಕೂರಿನಲ್ಲಿ ಮತದಾನ ಮಾಡಿದ್ದಾರೆ. ಮತದಾನದ ಬಳಿಕ ಮಾತನಾಡಿದ ಶ್ರೀಗಳು, ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಎಲ್ಲಾರು ಚಲಾಯಿಸಬೇಕು. 18 ವರ್ಷ ತುಂಬಿದ ಎಲ್ಲಾರು ತಮ್ಮ ತಮ್ಮ ಮತಗಟ್ಟೆಗಳಿಗೆ ಹೋಗಿ ಮತಹಾಕಿ. ಯಾರೂ ಕೂಡ ಮನೆಯಲ್ಲೇ ಉಳಿಯದೇ, ಪ್ರಜಾಪ್ರಭುತ್ವದ ಯಶಸ್ವಿಗೆ ಕಾರಣವಾಗಬೇಕು. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಬಹಳಷ್ಟು ಮಹತ್ವ ಇದೆ. ಆಮಿಷಗಳಿಗೆ ಒಳಗಾಗದೇ ನಮ್ಮ ಅಮೂಲ್ಯವಾದ ಮತ ನೀಡಿ. ತಮ್ಮ ಒಂದು ಮತಕ್ಕೆ ಬೆಲೆ ಕಟ್ಟಲಾಗದು ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳು ಬುಧವಾರ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: Karnataka Election 2023: ಪತ್ನಿ ಜೊತೆ ಬಂದು ಮತ ಹಾಕಿದ ನವರಸ ನಾಯಕ ಜಗ್ಗೇಶ್‌

Related Video