ದೇವರಾಜೇಗೌಡ-ಶಿವರಾಮೇಗೌಡ ಸಂಭಾಷಣೆ ಆಡಿಯೋ ವೈರಲ್‌! ರೇವಣ್ಣಗೆ ಇಂದು ಜಾಮೀನಾ? ಜೈಲಾ?

ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿಂದ ರೇವಣ್ಣ ಭವಿಷ್ಯ ನಿರ್ಧಾರ.!
ಲೈಂಗಿಕ ಕಿರುಕುಳ ಆರೋಪದಲ್ಲಿ ರೇವಣ್ಣಗೆ ಸಿಗುತ್ತಾ ಜಾಮೀನು..?
ವಿಚಾರಣೆ ಮುಗಿಸಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿರುವ ಕೋರ್ಟ್

Share this Video
  • FB
  • Linkdin
  • Whatsapp

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ(Prajwal Revanna obscene video case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಏಕಾಏಕಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್‌ಗಳು ಸಂಚಲನ ಸೃಷ್ಟಿಸಿವೆ. ವಕೀಲ ದೇವರಾಜೇಗೌಡ(Devarajegowda) ಮತ್ತು ಶಿವರಾಮೇಗೌಡ(LR Shivaramegowda) ಸಂಭಾಷಣೆ ಆಡಿಯೋ ಅದು ಎನ್ನಲಾಗ್ತಿದೆ. ಪೆನ್‌ಡ್ರೈವ್‌(Pen drive) ವೈರಲ್ ಸಂಬಂಧಿಸಿದ ಸಂಭಾಷಣೆ ವಿಡಿಯೋ ವೈರಲ್ ಮಾಡಿದ ಬಗ್ಗೆ ಇಬ್ಬರ ನಡುವೆ ಸಂಭಾಷಣೆ ನಡೆದಿದೆ. ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ಆಡಿಯೋ ರಿಲೀಸ್ ಮಾಡಿದ್ದಾರೆ ಎಂದು ಹೇಳುವಂತೆ ಶಿವರಾಮೇಗೌಡ ಸಲಹೆ ನೀಡಿದ್ದಾರೆ ಎನ್ನಲಾಗ್ತದೆ. ಎಸ್ಐಟಿ(SIT) ವಿಚಾರಣೆ ವೇಳೆ ಕುಮಾರಸ್ವಾಮಿ ಹೆಸರು ಹೇಳುವಂತೆ ಸೂಚನೆ ನೀಡಿದ್ದು, ದೇವರಾಜೇಗೌಡಗೆ ಶಿವರಾಮೇಗೌಡ ಸೂಚಿಸಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ.

ಇದನ್ನೂ ವೀಕ್ಷಿಸಿ: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಫ್ಯಾನ್ಸ್‌ಗೆ ಬಿಗ್ ಶಾಕ್! ಎರಡು ಹುಲಿಗಳ ಕಾಂಬೋ ಸಿನಿಮಾಗೆ ಡ್ರ್ಯಾಗನ್ ಟೈಟಲ್ ಫಿಕ್ಸ್!

Related Video