Asianet Suvarna News Asianet Suvarna News

ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಫ್ಯಾನ್ಸ್‌ಗೆ ಬಿಗ್ ಶಾಕ್! ಎರಡು ಹುಲಿಗಳ ಕಾಂಬೋ ಸಿನಿಮಾಗೆ ಡ್ರ್ಯಾಗನ್ ಟೈಟಲ್ ಫಿಕ್ಸ್!

ಕೆಜಿಎಫ್ ಸಲಾರ್ ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರೋ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಟಾಲಿವುಡ್ ಯಂಗ್ ಟೈಗರ್, ಜೂ.ಎನ್‌ಟಿಆರ್ ಸಿನಿಮಾದ ಬಿಗ್ ನ್ಯೂಸ್ ಕೊಟ್ಟಿದ್ದಾರೆ.

ಎರಡು ಟೈಗರ್‌ಗಳ ಕಾಂಬೋ ಸಿನಿಮಾಗೆ ಡ್ರ್ಯಾಗನ್ ಎಂದು ಟೈಟಲ್ ಇಟ್ಟಿದ್ದಾರೆ.ಮೇ. 20 ರಂದು ತಾರಕ್ ಹುಟ್ಟುಹಬ್ಬದಂದು ಪ್ರಶಾಂತ್ ನೀಲ್(Prashant Neel)-ಎನ್‌ಟಿಆರ್ ಕಾಂಬೋದ ಮುಂಬರುವ ಚಿತ್ರದ ಕುರಿತು ಬಿಗ್ ಅಪ್ಡೇಟ್ ನೀಡುವುದಾಗಿ ನಿರ್ಮಾಪಕರು ಅನೌನ್ಸ್ ಕೂಡ ಮಾಡಿದ್ರು. ಎನ್‌ಟಿಆರ್(Junior NTR) ಜನ್ಮದಿನದಂದು ಟೈಟಲ್ ಜೊತೆಗೆ ಸಿನಿಮಾದ ಫಸ್ಟ್ ಲುಕ್ ಕೂಡ ಅನೌನ್ಸ್ ಆಗಲಿದೆ ಎಂದು ಅಭಿಮಾನಿಗಳು ಭಾವಿಸಿದ್ರು. ಆದರೆ ಅದಕ್ಕೂ ಮೊದಲೇ ಟೈಟಲ್ ಅನೌನ್ಸ್ ಆಗಿ ಫ್ಯಾನ್ಸ್‌ಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಜೂನಿಯರ್ ಎನ್‌ಟಿಆರ್ -ಪ್ರಶಾಂತ್ ಕಾಂಬಿನೇಷನ್ ಸಿನಿಮಾಗೆ  ‘ಡ್ರ್ಯಾಗನ್’(Dragon) ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎನ್ಟಿಆರ್ ಅಭಿಮಾನಿಗಳು ಟೈಟಲ್ ಪರ್ಫೆಕ್ಟ್ ಆಗಿದೆ ಎಂದು ಕಮೆಂಟ್ ಮಾಡ್ತಿದ್ದಾರೆ. ಈ ವೇಳೆ ಫ್ಯಾನ್ಸ್‌ಗೂ ಶಾಕಿಂಗ್ ನ್ಯೂಸ್ ಎದುರಾಗಿದೆ. ತಮಿಳು ನಿರ್ಮಾಪಕ ಅಶ್ವತ್ ಮರಿಮುತ್ತು ಅವರು ಡ್ರ್ಯಾಗನ್ ಎಂಬ ಶೀರ್ಷಿಕೆಯ ಹೊಸ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಟೈಟಲ್ ಅನ್ನು ಸಹ ಫಿಕ್ಸ್ ಮಾಡಲಾಗಿದೆ. ಈ ಚಿತ್ರವು ಕಾಲೇಜು ಹಿನ್ನಲೆ ಸ್ಟೋರಿಯಾಗಿದೆ. ಇದು ತಮಿಳು ಸಿನಿಮಾ ಎನ್ನಲಾಗ್ತಿದೆ. ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಚಿತ್ರಕ್ಕೂ ‘ಡ್ರ್ಯಾಗನ್’ ಎಂಬ ಟೈಟಲ್ ಫಿಕ್ಸ್ ಆಗಿದೆ. ಸಿನಿಮಾ ತಂಡದ ಮುಂದಿನ ನಿರ್ಧಾರ ಏನು ಅನ್ನೋದು ಅಭಿಮಾನಿಗಳ ಪ್ರಶ್ನೆ ಆಗಿದೆ.

ಇದನ್ನೂ ವೀಕ್ಷಿಸಿ:  Mollywood: ಪಕ್ಕದ ಮಾಲಿವುಡ್‌ನಲ್ಲಿ ಬಂಗಾರದ ಬೆಳೆ! ಸ್ಯಾಂಡಲ್‌ವುಡ್‌ ಬೆಳವಣಿಗೆ ಅದೋಗತಿ!