ನನ್ನದೇನು ತಪ್ಪಿಲ್ಲ, ನನಗೆ 24 ಗಂಟೆಗೊಮ್ಮೆ ಮೆಡಿಕಲ್ ಚೆಕಪ್ ಅಗತ್ಯವಿದೆ: ಜಡ್ಜ್‌ ಮುಂದೆ ನಾಗೇಂದ್ರ ಮನವಿ

ಮಾಜಿ ಸಚಿವ ನಾಗೇಂದ್ರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಅವರನ್ನು 6 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಲಾಗಿದೆ.
 

First Published Jul 13, 2024, 10:38 AM IST | Last Updated Jul 13, 2024, 10:38 AM IST

ಮಾಜಿ ಸಚಿವ ನಾಗೇಂದ್ರ ಬಂಧನ (Former minister Nagendra) ಬೆನ್ನಲ್ಲೆ ಶಾಸಕ ಬಸನಗೌಡ ದದ್ದಲ್‌ರನ್ನು(Basanagowda Daddal) ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇತ್ತ ಶಾಸಕ ಬಸನಗೌಡ ದದ್ದಲ್‌ರನ್ನ ಕೂಡ ಇಡಿ ವಶಕ್ಕೆ (ED custody) ಪಡೆಯುವ ಸಾಧ್ಯತೆ ಇದೆ. ಎರಡನೇ ಬಾರಿಗೆ ಎಸ್ಐಟಿ(SIT) ಮುಂದೆ ವಿಚಾರಣೆಗೆ ಹಾಜರಾಗಿದ್ದ ದದ್ದಲ್. ಸದ್ಯ ಯಲಹಂಕ ನಿವಾಸದಲ್ಲಿ ದದ್ದಲ್ ಇದ್ದು, ದದ್ದಲ್ ನಿವಾಸದಲ್ಲಿ ಯಾರು ಇಲ್ಲ. ಎಸ್ಐಟಿ ವಿಚಾರಣೆ ಮುಗಿಸಿ ದದ್ದಲ್ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಾಜಿ ಸಚಿವ ನಾಗೇಂದ್ರ ಮಾತನಾಡಿ, ನನಗೆ 24 ಗಂಟೆಗೊಮ್ಮೆ ಮೆಡಿಕಲ್ ಚೆಕಪ್ ಅಗತ್ಯವಿದೆ ಎಂದು ಜಡ್ಜ್‌ ಮುಂದೆ ಹೇಳಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳಿಗೆ ಮೆಡಿಕಲ್‌ ಟೆಸ್ಟ್‌ ಮಾಡಿಸುವಂತೆ ಜಡ್ಜ್ ಸೂಚನೆ ನೀಡಿದ್ದಾರೆ. ಈಗಾಗಲೇ ದದ್ದಲ್ ನಿವಾಸದಲ್ಲಿ 2 ದಿನ ಇಡಿ ತೀವ್ರ ತಲಾಶ್ ನಡೆಸಿದೆ. ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇದು ಬೋರ್ಡ್ ಮಿಟೀಂಗ್ ಮೂಲಕ ಆಗಿರುವ ಹಣ ವರ್ಗಾವಣೆ. ನಾನು ಇಲಾಖೆ ಸಚಿವಾನಾಗಿದ್ದೆ ಅಷ್ಟೇ. ಅಕ್ರಮ ಹಣ ವರ್ಗಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ನನಗೆ ಮೆಡಿಕಲ್ ಅವಶ್ಯಕತೆ ಇದೆ ಎಂದು ನಾಗೇಂದ್ರ ಕೋರ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಬಹುಕೋಟಿ ಅಕ್ರಮದ ಬಗ್ಗೆ ನಾಗೇಂದ್ರಗೆ ಸಾಲು ಸಾಲು ಪ್ರಶ್ನೆ: ಜಡ್ಜ್‌ ಎದುರು ಹಾಜರುಪಡಿಸಲಿರುವ ಇಡಿ ಅಧಿಕಾರಿಗಳು