ಇಂದು ನಾರದ ಮಹರ್ಷಿ ಜಯಂತಿ: ನಿಮ್ಮ ಕಷ್ಟ ಪರಿಹಾರಕ್ಕೆ ನಾರದರನ್ನು ನೆನೆಯಿರಿ

ಶುಭೋದಯ ಓದುಗರೇ, ಇಂದು ನಾರದ ಜಯಂತಿ ಇದ್ದು, ಅವರನ್ನು ಭಕ್ತಿಯಿಂದ ನೆನೆಯುವ ಮೂಲಕ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಿ.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಕೃಷ್ಣ ಪಕ್ಷ, ಭಾನುವಾರ, ದ್ವಿತೀಯ ತಿಥಿ, ಅನೂರಾಧ ನಕ್ಷತ್ರ.

ಈ ದಿನ ವೈಶಾಖಾ ಪ್ರತಿಪಾದದಲ್ಲಿ ನಾರದ ಜಯಂತಿಯಾಗಿ ಆಚರಿಸಲಾಗುತ್ತದೆ. ನಾರದ ಮಹರ್ಷಿಗಳು ಮುಕ್ತಿಯನ್ನು ನೀಡುವಂತರಾಗಿದ್ದಾರೆ. ಬ್ರಹ್ಮ ಮಾನಸ ಪುತ್ರರಲ್ಲಿ ನಾರದರು ಒಬ್ಬರು. ಪ್ರತಿಯೊಬ್ಬರ ಸಂಕಷ್ಟವನ್ನು ಕಳೆದು, ಎಲ್ಲಾರಿಗೂ ಶಾಂತಿ, ನೆಮ್ಮದಿಯನ್ನು ನೀಡುವುದು ಅವರ ಉದ್ದೇಶವಾಗಿತ್ತು. ಪರಮಾತ್ಮನನ್ನು ಹೇಗೆ ಸ್ಮರಿಸಬೇಕು ಎಂಬುದನ್ನು ಅವರನ್ನು ನೋಡಿ ಕಲಿಯಬೇಕಾಗಿದೆ. ಅವರು ಹೋದ ಕಡೆ ನಮಗೆ ಕಲಹ ಕಂಡರೂ, ಅದರಲ್ಲಿ ಮುಕ್ತಿ ದೊರೆಯುತ್ತಿತ್ತು. ಋಷಿ ನಾರದರು ಭಗವಾನ್ ವಿಷ್ಣುವಿನ ಅನುಯಾಯಿಯಾಗಿದ್ದ ಕಾರಣ ಈ ದಿನ ಭಗವಾನ್‌ ವಿಷ್ಣುವನ್ನು ಕೂಡ ಪೂಜಿಸಲಾಗುತ್ತದೆ. ನಾರದ ಜಯಂತಿ ಪೂಜೆ ವಿಧಿಯು ವಿಷ್ಣು ಆರತಿಯನ್ನು ಒಳಗೊಂಡಿರುತ್ತದೆ ಮತ್ತು ಜನರು ವಿಷ್ಣುವಿಗೆ ತುಳಸಿ ಮತ್ತು ಹೂವುಗಳನ್ನು ಅರ್ಪಿಸುತ್ತಾರೆ. ಈ ದಿನ ನಿಮಗೆನಾದ್ರೂ ದುಃಖ ಇದ್ರೆ ಕೈಮುಗಿದು ಅವರನ್ನ ಒಮ್ಮೆ ಭಕ್ತಿಯಿಂದ ನೆನೆಯಿರಿ. ನಿಮ್ಮ ಕಷ್ಟಗಳು ದೂರವಾಗುತ್ತವೆ.

ಇದನ್ನೂ ವೀಕ್ಷಿಸಿ: ಯಾರಿಗಾದ್ರೂ ಮತಕೊಡಿ, ಆದ್ರೆ ಒಂದು ಪಕ್ಷಕ್ಕೆ ಬಹುಮತ ನೀಡಿ: ನಟಿ ರಮ್ಯಾ

Related Video