ಯಾರಿಗಾದ್ರೂ ಮತಕೊಡಿ, ಆದ್ರೆ ಒಂದು ಪಕ್ಷಕ್ಕೆ ಬಹುಮತ ನೀಡಿ: ನಟಿ ರಮ್ಯಾ

ನಿಮ್ಮ ಸುವರ್ಣ ನ್ಯೂಸ್‌ನಲ್ಲಿ ನೋಡಿ ನಟಿ ರಮ್ಯಾ ಅವರ ವಿಶೇಷ ಸಂದರ್ಶನ...

Share this Video
  • FB
  • Linkdin
  • Whatsapp

ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಸ್ಟಾರ್‌ ನಟ-ನಟಿಯರ ಜೊತೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ನಟಿ ರಮ್ಯಾ ಹೊರತಾಗಿಲ್ಲ. ಅವರು ಸಹ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ನಿಮ್ಮ ಸುವರ್ಣ ನ್ಯೂಸ್‌ ನಟಿ, ಮಾಜಿ ಸಂಸದೆ ರಮ್ಯಾ ಅವರ ವಿಶೇಷಸಂದರ್ಶನ ಮಾಡಿದ್ದು, ಅದರ ಕೆಲ ತುಣುಕು ಇಲ್ಲಿದೆ. ಈ ಸಂದರ್ಶನದಲ್ಲಿ ನಟಿ ರಮ್ಯಾ ಮಾತನಾಡಿ, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಜನ ನಮ್ಮನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದಾರೆ. ಕಾಂಗ್ರೆಸ್‌ ಯಾವತ್ತೂ ಹಿಂದೂಗಳನ್ನು ಬೇರೆಯಾಗಿ ನೋಡಿಲ್ಲ. ನಾವೆಲ್ಲಾ ಒಗ್ಗಟ್ಟಾಗಿ ಇದ್ದಾಗ ಮಾತ್ರ ದೇಶಕ್ಕೆ ಒಳ್ಳೆಯದು ಆಗುತ್ತದೆ. ಈ ಬಾರಿ ಕಾಂಗ್ರೆಸ್‌ ಗೆಲ್ಲಬೇಕು. ಅಲ್ಲದೇ 100ಕ್ಕಿಂತ ಹೆಚ್ಚು ಸ್ಥಾನ ಕಾಂಗ್ರೆಸ್‌ ಗೆಲ್ಲಲಿದೆ ಎಂದು ನಟಿ ರಮ್ಯಾ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Related Video