Asianet Suvarna News Asianet Suvarna News

Today Horoscope: ಇಂದು ಭರಣಿ ನಕ್ಷತ್ರವಿದ್ದು, ಹಿರಿಯರ ಸ್ಮರಣೆ ಮಾಡಿ..ಕಾಗೆಗೆ ಅನ್ನವನ್ನು ಸಮರ್ಪಣೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಸೋಮವಾರ, ತೃತೀಯ ತಿಥಿ, ಭರಣಿ ನಕ್ಷತ್ರ. 

ಮಹಾಲಯ ಪಕ್ಷದಲ್ಲಿ ನಾವು ಇದ್ದು, ಕೃಷ್ಣ ಪಕ್ಷಕ್ಕೆ ಪಿತೃಪಕ್ಷ ಎಂದೂ ಹೆಸರು ಇದೆ. ಇಂದು ಭರಣಿ ನಕ್ಷತ್ರ ಇರುವುದರಿಂದ ಮಹಾಭರಣಿ ಎಂದು ಕರೆಯಲಾಗುತ್ತದೆ. ಧರ್ಮದ ಚೌಕಟ್ಟಿನಲ್ಲಿ ಇರುವವರಿಗೆ ಯಮ ಮಹಾವರಗಳನ್ನು ನೀಡುತ್ತಾನೆ. ಅದೇ ಯಾರು ಅಧರ್ಮದ ದಾರಿಯಲ್ಲಿ ನಡೆಯುತ್ತಾರೋ ಅವರಿಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ. ಇಂದು ಹಿರಿಯರ ಸ್ಮರಣೆ ಮಾಡಿ. ಸಾಧ್ಯವಾದ್ರೆ ಕಾಗೆಗೆ ಅನ್ನವನ್ನು ಸಮರ್ಪಣೆ ಮಾಡಿ. 

ಇದನ್ನೂ ವೀಕ್ಷಿಸಿ:  ಮಕ್ಕಳ ಆಹಾರ ಕ್ರಮ ಹೇಗಿರಬೇಕು? ಅವರ ಬುದ್ಧಿಶಕ್ತಿಗೆ ಅಗತ್ಯವಾದ ಆಹಾರ ಪದ್ಧತಿ ಯಾವುದು ?

Video Top Stories