ಮಕ್ಕಳ ಆಹಾರ ಕ್ರಮ ಹೇಗಿರಬೇಕು? ಅವರ ಬುದ್ಧಿಶಕ್ತಿಗೆ ಅಗತ್ಯವಾದ ಆಹಾರ ಪದ್ಧತಿ ಯಾವುದು ?
ಮಕ್ಕಳಿಗೆ ಯಾವ ರೀತಿಯ ಆಹಾರವನ್ನು ನೀಡಬೇಕು ಹಾಗೂ ಎಷ್ಟು ಪ್ರಮಾಣದಲ್ಲಿ ನೀಡಬೇಕು. ಯಾವ ವಯಸ್ಸಿನ ಮಕ್ಕಳಿಗೆ ಏನು ಕೊಡಬೇಕು ? ಕೊಡಬಾರದು ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಆಹಾರ ತಜ್ಞೆ ಪಲ್ಲವಿ ಇಡೂರು ಮಾಹಿತಿ ನೀಡಲಿದ್ದಾರೆ.
ಇಂದಿನ ಪಾಡ್‌ಕಾಸ್ಟ್‌ನಲ್ಲಿ ಮಕ್ಕಳ ಆಹಾರ ಪದ್ಧತಿ ಹೇಗಿರಬೇಕು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಆಹಾರ ತಜ್ಞೆ ಪಲ್ಲವಿ ಇಡೂರು ಮಾತನಾಡಿದ್ದಾರೆ. ನಾವು ತಿನ್ನುವ ಆಹಾರದ ಬಗ್ಗೆ ತುಂಬಾ ಕಾಳಜಿವಹಿಸಬೇಕು. ಒಂದು ವರ್ಷದ ಒಳಗಿನ ಮಕ್ಕಳಿಗೆ ತಾಯಿ ಹಾಲು ತುಂಬಾ ಮುಖ್ಯವಾಗಿದೆ. ಒಂದು ವರ್ಷ ನಂತರದ ಮಕ್ಕಳಿಗೆ ಅವರ ಆರೋಗ್ಯ ಮತ್ತು ದೇಹವನ್ನು ಸದೃಢ ಮಾಡುವಂತ ಆಹಾರವನ್ನು ಕೊಡಬೇಕು. ಮಕ್ಕಳ ಬ್ರೇನ್ ,ಕಣ್ಣಿನ ಆರೋಗ್ಯಕ್ಕೆ ತಾಯಿಯ ಹಾಲು ತುಂಬಾ ಮುಖ್ಯವಾಗಿದೆ. ಗೋದಿಯನ್ನು ಹೆಚ್ಚಾಗಿ ತಿನ್ನುವ ಕಡೆ ಕ್ಯಾನ್ಸರ್ ಹೆಚ್ಚಾಗಿದೆ. ಅನ್ನ ತಿನ್ನುವುದು ಕೆಟ್ಟದಲ್ಲ. ಆಹಾರ ಪದ್ಧತಿ ಒಂದೊಂದು ಪ್ರದೇಶಕ್ಕೂ ಬದಲಾಗಲಿದೆ. ನಮ್ಮ ಪರಿಸರದ ಸುತ್ತಮುತ್ತಲಿನ ಆಹಾರವನ್ನು ತಿನ್ನುವುದು ನಮ್ಮ ದೇಹಕ್ಕೆ ಉತ್ತಮ. ನಾವು ಒಂದೇ ಆಹಾರ ತಿನ್ನಬೇಕೆಂದಿಲ್ಲ. ಆದ್ರೆ ಪ್ರತಿದಿನ ನಮ್ಮ ರೀತಿಯ ಆಹಾರವನ್ನು ಬಿಟ್ಟು ಬೇರೆ ತಿನ್ನುವುದು ತೊಂದರೆ ಮಾಡಬಹುದು ಎಂದು ಆಹಾರ ತಜ್ಞೆ ಪಲ್ಲವಿ ಇಡೂರು ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: ಇಂಡಿಯನ್ ಕಿಚನ್‌ನಲ್ಲಿ ಗ್ರೇಟ್ ಆಯುರ್ವೇದ ಅಡಗಿದೆ: ಡಾ.ಸಿ.ಎ. ಕಿಶೋರ್