Asianet Suvarna News Asianet Suvarna News

ಇಂದಿನ ರಾಶಿಭವಿಷ್ಯ: ಇಂದು ಶಿವಗಣ ಆರಾಧಿಸಿ, 12 ರಾಶಿಗಳ ಫಲ ಹೀಗಿದೆ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ಯಾವ ರಾಶಿಗಳ ಭವಿಷ್ಯವೇನು?
 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಮಂಗಳವಾರ, ಚತುರ್ಥಿ ತಿಥಿ, ಆರಿದ್ರಾ ನಕ್ಷತ್ರ. 

ಈ ದಿನ ಮಂಗಳವಾರ ಆಗಿದ್ದು, ಆರಿದ್ರಾ ನಕ್ಷತ್ರ ಇದೆ. ಇದನ್ನು ಶಿವನ ನಕ್ಷತ್ರ ಎಂದು ಪರಿಗಣಿಸಲಾಗುತ್ತದೆ. ಈ ದಿನ ಶಿವಗಣವನ್ನು ಪೂಜಿಸಿ. ಈ ದಿನ ಅಮ್ಮನವರ ಮತ್ತು ಸುಬ್ರಹ್ಮಣ್ಯ ಸ್ವಾಮಿ ದಿನ ಸಹ ಆಗಿದೆ. ಈ ದಿನ ಪರಮೇಶ್ವರನಿಗೆ ಒಂದು ಪೂಜೆ ಸಲ್ಲಿಸಿ, ಆತನ ಅನುಗ್ರಹಕ್ಕೆ ಪಾತ್ರರಾಗಿ. ಪ್ರಾರ್ಥನೆ ಮಾಡಿ, ಪ್ರದಕ್ಷಿಣೆ ಹಾಕಿ ನಿಮ್ಮ ಕೋರಿಕೆಗಳನ್ನು ದೇವರ ಬಳಿ ಹೇಳಿಕೊಳ್ಳಿ. 

ಇದನ್ನೂ ವೀಕ್ಷಿಸಿ:ನಡು ರಸ್ತೆಯಲ್ಲೇ ಕರುವಿಗೆ ಹಾಲುಣಿಸಿದ ಗೋವು : ವಾಹನಗಳ ಹಾರ್ನ್‌ಗೆ ಜಗ್ಗದೆ ಮಾತೃಹೃದಯಕ್ಕೆ ಸಾಕ್ಷಿಯಾದ ಆಕಳು !

Video Top Stories