Today Rashibhavishy: ಈ ದಿನ ಸಪ್ತಮಿ ಯೋಗವಿದ್ದು, ಸೂರ್ಯಾರಾಧನೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Jul 9, 2023, 8:49 AM IST | Last Updated Jul 9, 2023, 8:49 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಭಾನುವಾರ, ಸಪ್ತಮಿ ತಿಥಿ, ಉತ್ತರಾಭಾದ್ರ ನಕ್ಷತ್ರ.

ಭಾನುವಾರ ಸಪ್ತಮಿ ಯೋಗ ಬಂದರೇ ತುಂಬಾ ಒಳ್ಳೆಯದು. ಈ ದಿನ ಸೂರ್ಯಾರಾಧನೆ ಮಾಡಿ. ಇದ್ದವರು ಆತನಿಗೆ ಬೆಳ್ಳಿ ದೀಪದ ಆರತಿ ಬೆಳಕಿ, ಇಲ್ಲದವರು ಕಲವೀರ ಪುಷ್ಪವನ್ನು ಸಮರ್ಪಣೆ ಮಾಡಿ. ಇದು ಆರೋಗ್ಯ, ಬುದ್ಧಿ ಶಕ್ತಿಯನ್ನು ಸರಿಪಡಿಸುತ್ತದೆ. ಸೂರ್ಯನಿಗೆ ಅತ್ಯಂತ ಪ್ರಿಯವಾಗಿರುವುದು ಬೆಲ್ಲ, ಹಾಲು ಹಾಗೂ ಅಕ್ಕಿಯ ಪಾಯಸ. ಇಲ್ಲವೇ ರವೆ ಗೋದಿ ಪಾಯಸವನ್ನು ಮಾಡಿ ನೈವೇದ್ಯ ಮಾಡಿ. ಇಲ್ಲವೇ ಕೆಂಪು ಹೂವಿನಿಂದ ಅರ್ಚನೆ ಮಾಡಿಸಿ.

ಇದನ್ನೂ ವೀಕ್ಷಿಸಿ:  ಬಿಜೆಪಿ ವಿಪಕ್ಷ ಸ್ಥಾನಕ್ಕೆ ಲಿಂಗಾಯಿತ ನಾಯಕ, ಒಕ್ಕಲಿಗ ಸಮುದಾಯಕ್ಕೆ ಅಧ್ಯಕ್ಷ; ನಾಳೆ ಘೋಷಣೆ?