Today Horoscope: ತುಲಾ ರಾಶಿಯವರಿಗೆ ಇಂದು ಲಾಭದ ದಿನ..ಸಲಹೆಗಳಿಂದ ಕಾರ್ಯಕ್ಕೆ ಹಾನಿಯಾಗುವ ಸಾಧ್ಯತೆ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಭಾನುವಾರ, ದ್ವಾದಶಿ ತಿಥಿ, ಮೂಲ ನಕ್ಷತ್ರ.

ಈ ದಿನ ಪ್ರದೋಷ ಪೂಜೆ ಇದೆ. ಸಂಜೆಯ ನಂತರ ಸೂರ್ಯನಿಗೆ 32 ದೀಪಗಳನ್ನು ಹಚ್ಚಿ. ಇದರ ಜೊತೆಗೆ ವೀಳ್ಯದೆಲೆ ಹಾಗೂ ಹಣ್ಣುಗಳನ್ನು ದಾನ ಮಾಡಿ, ಇದರಿಂದ ಕಣ್ಣಿನ ದೋಷವಿರುವವರಿಗೆ ಸರಿಯಾಗುವ ಸಾಧ್ಯತೆ ಇರುತ್ತದೆ. ಈ ದಿನ ವೃಷಭ ರಾಶಿಯವರ ಮನಸ್ಸು ನೋವಿನಲ್ಲಿ ಇರುತ್ತದೆ. ಸ್ತ್ರೀಯರಿಗೆ ಆಪ್ತರು ದೂರವಾಗುತ್ತಾರೆ. ಇಂದು ಅಮ್ಮನವರಿಗೆ ಕ್ಷೀರ ದಾನವನ್ನು ಮಾಡಿ. ವೃಶ್ಚಿಕ ರಾಶಿಯವರು ಮಾತನಾಡುವಾಗ ಎಚ್ಚರಿಕೆ ವಹಿಸಿ, ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ. ಧನಸ್ಸು ರಾಶಿಯವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.

ಇದನ್ನೂ ವೀಕ್ಷಿಸಿ: News Hour: ಉಡುಪಿ ವಿಡಿಯೋಕಾಂಡ, ತನಿಖೆಯಂತೂ ಶುರುವಾಯ್ತು, ತಾರ್ಕಿಕ ಅಂತ್ಯ ಸಿಗುತ್ತಾ?

Related Video