Asianet Suvarna News Asianet Suvarna News

News Hour: ಉಡುಪಿ ವಿಡಿಯೋಕಾಂಡ, ತನಿಖೆಯಂತೂ ಶುರುವಾಯ್ತು, ತಾರ್ಕಿಕ ಅಂತ್ಯ ಸಿಗುತ್ತಾ?

ಉಡುಪಿ ವಿಡಿಯೋಕಾಂಡದ ವಿಚಾರದಲ್ಲಿ ಶನಿವಾರ ಮೂರು ಪ್ರಮುಖ ಬೆಳವಣಿಗೆಗಳು ಆಗಿವೆ. ಅದರೊಂದಿಗೆ ತನಿಖೆ ಕೂಡ ಆರಂಭವಾಗಿದ್ದು, ಈಗ ಈ ತನಿಖೆ ತಾರ್ಕಿಕ ಅಂತ್ಯ ಕಾಣುತ್ತಾ ಎನ್ನುವ ಅನುಮಾನ ವ್ಯಕ್ತವಾಗಿದೆ.
 

ಬೆಂಗಳೂರು (ಜು.29): ಉಡುಪಿ ವಿಡಿಯೋಕಾಂಡದ ವಿಚಾರವಾಗಿ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ತನಿಖಾಧಿಕಾರಿಯನ್ನು ಎಸ್‌ಪಿ ಬದಲಿಸಿದ್ದಾರೆ. ಕುಂದಾಪುರದ ಡಿವೈಎಸ್‌ಪಿ ಬೆಳ್ಳಿಯಪ್ಪ ಇನ್ನು ತನಿಖೆ ನಡೆಸಲಿದ್ದು, ಇದರ ಬೆನ್ನಲ್ಲಿಯೇ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿಚಾರಣೆ ಅಜ್ಞಾತ ಸ್ಥಳದಲ್ಲಿ ನಡೆಸಲಾಗಿದೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ.

ಇನ್ನು ಪ್ರಕರಣದಲ್ಲಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ತನಿಖಾ ಹಂತದಲ್ಲಿದ್ದು, ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುವವರು ಎಂದು ಟೀಕಿಸಿದ್ದಾರೆ. ಇನ್ನು ಸಚಿವ ಪ್ರಿಯಾಂಕ್‌ ಖರ್ಗೆ, ಬಿಜೆಪಿಯವರು ಯಾರನ್ನು ನಂಬುತ್ತಾರೆ ಅನ್ನೋದನ್ನು ಮೊದಲು ಡಿಸೈಡ್‌ ಮಾಡಬೇಕು ಎಂದಿದ್ದಾರೆ.

ಉಡುಪಿ ವಿಡಿಯೋಕಾಂಡ, 11 ದಿನಗಳ ಬಳಿಕ ಆರೋಪಿ ವಿದ್ಯಾರ್ಥಿನಿಯರ ವಿಚಾರಣೆ!

ತನಿಖೆ ಆರಂಭವಾಗಿರುವ ಬೆನ್ನಲ್ಲಿಯೇ ನೇತ್ರಜ್ಯೋತಿ ಕಾಲೇಜಿನ ಎಲ್ಲಾ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರದ ಹಂತವಾಗಿ ಕಾಲೇಜಿನ ಸನಿಹದ ಮೊಬೈಲ್‌ ಟವರ್‌ ಮೂಲಕ ಎಲ್ಲಾ ಕಾಲ್‌ ಡೀಟೇಲ್‌ಗಳನ್ನು ಪತ್ತೆ ಮಾಡುವ ಕೆಲಸವೂ ನಡೆಯಲಿದೆ.

Video Top Stories