Today Horoscope: ಇಂದಿನ ನಿಮ್ಮ ರಾಶಿ ಭವಿಷ್ಯ ಹೀಗಿದ್ದು, ಮಿಥುನ ರಾಶಿಯವರಿಗೆ ಈ ದಿನ ವೃತ್ತಿಯಲ್ಲಿ ಲಾಭ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಗುರುವಾರ, ಅಷ್ಟಮಿ ತಿಥಿ, ಅನೂರಾಧ ನಕ್ಷತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಮಿ ತಿಥಿ ಇರುವುದರಿಂದ ಈ ದಿನ ಅಷ್ಟು ಶುಭವಲ್ಲ. ಕೆನೆ ಮೊಸರು ಹಾಗೂ ಅಲಸಂದೆ ಕಾಳನ್ನು ಈಶ್ವರ ಸನ್ನಿಧಾನಕ್ಕೆ ಕೊಟ್ಟು, ನಿಮ್ಮ ಕೆಲಸ ನೆರವೇರಲಿ ಎಂದು ಪ್ರಾರ್ಥನೆ ಮಾಡಿ. ಈ ದಿನ ಗುರುವಾರವಾಗಿದ್ದು, ಗುರು ಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ. ಮಿಥುನ ರಾಶಿಯವರಿಗೆ ಈ ದಿನ ವೃತ್ತಿಯಲ್ಲಿ ಲಾಭ ದೊರೆಯಲಿದೆ. ಹಿರಿಯರ ಸಹಕಾರ ಹಾಗೂ ಧರ್ಮಶ್ರದ್ಧೆ ಇರಲಿದೆ. ಇಂದು ಲಲಿತಾ ಪ್ರಾರ್ಥನೆ ಮಾಡಿ. ಈಶ್ವರ ಸನ್ನಿಧಾನಕ್ಕೆ ಕೆನೆ ಮೊಸರು ಸಮರ್ಪಣೆ ಮಾಡಿ.

ಇದನ್ನೂ ವೀಕ್ಷಿಸಿ: ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್ ಕೆಲಸ ಆರಂಭ, ಫೋಟೋ ಸೇರಿ ಮಾಹಿತಿ ರವಾನೆ!

Related Video