ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್ ಕೆಲಸ ಆರಂಭ, ಫೋಟೋ ಸೇರಿ ಮಾಹಿತಿ ರವಾನೆ!

ಚಂದ್ರಯಾನ 3 ಯಶಸ್ಸಿನ ಹಿಂದಿನ ಸೂತ್ರಧಾರರು ಯಾರು?, ಲ್ಯಾಂಡ್ ಆದ ಬಳಿಕ ವಿಕ್ರಮ್ ಲ್ಯಾಂಡರ್ ರವಾನಿಸಿದ ಮಾಹಿತಿ ಏನು? ಭಾರತದಲ್ಲಿ ಚಂದ್ರಯಾನ ಯಶಸ್ವಿ ಸಂಭ್ರಮ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ  ನ್ಯೂಸ್ ಹವರ್ ಇಲ್ಲಿದೆ.
 

First Published Aug 23, 2023, 11:29 PM IST | Last Updated Aug 23, 2023, 11:29 PM IST

41 ದಿನಗಳ ಹಿಂದೆ ಉಡಾವಣೆಗೊಂಡಿದ್ದ ಚಂದ್ರಯಾನ 3 ಇಂದು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಈ ಮೂಲಕ ಭಾರತ ಇತಿಹಾಸ ನಿರ್ಮಿಸಿದೆ. ಇಸ್ರೋ ವಿಜ್ಞಾನಿಗಳ ಸತತ ಪರಿಶ್ರಮ, ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಇಂದು ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದೆ. ಈ ಮೂಲಕ ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟ ನಾಲ್ಕನೇ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತ ಮೊದಲ ಬಾರಿಗೆ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ದೇಶ ಭಾರತ ಅನ್ನೋ ಕೀರ್ತಿಗೆ ಪಾತ್ರವಾಗಿದೆ. ಇಸ್ರೋದ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಇದರ ಬೆನ್ನಲ್ಲೇ ಕಾರ್ಯ ಆರಂಭಿಸಿದೆ. ಚಂದ್ರನ ನಾಲ್ಕು ಫೋಟೋಗಳನ್ನು ವಿಕ್ರಮ್ ಲ್ಯಾಂಡರ್ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಕಳುಹಿಸಿದೆ.