
Today Horoscope: ಇಂದಿನಿಂದ ಮಂಗಳಗೌರಿ ವ್ರತ ಆರಂಭ, ಇದರ ಮಹತ್ವವೇನು ಗೊತ್ತಾ ?
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,ಮಂಗಳವಾರ, ಷಷ್ಠಿ ತಿಥಿ, ಸ್ವಾತಿ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ದಿನ ಶ್ರಾವಣ ಮಾಸದ ಮೊದಲ ಮಂಗಳವಾರವಾಗಿದ್ದು, ಇಂದಿನಿಂದ ಮಂಗಳಗೌರಿ ವ್ರತವನ್ನು ಮಾಡಲಾಗುತ್ತದೆ. ಈ ವ್ರತವನ್ನು ಸಾಮಾನ್ಯವಾಗಿ ವಿವಾಹಿತ ಸ್ತ್ರೀ 5 ವರ್ಷಗಳ ಕಾಲ ಮಾಡುತ್ತಾರೆ. ಮಹಿಳೆಯರ ಮಾಂಗಲ್ಯ ಗಟ್ಟಿಯಾಗಿರಲಿ ಎಂದು ಈ ವ್ರತವನ್ನು ಮಾಡಲಾಗುತ್ತದೆ. ಈ ದಿನ ಶಿವನ ಸನ್ನಿಧಾನದಲ್ಲಿ ಭಕ್ತಿಯಿಂದ ಪೂಜೆಯನ್ನು ಮಾಡಿ.
ಇದನ್ನೂ ವೀಕ್ಷಿಸಿ: ಶತ್ರುಗಳಂತೆ ನೋಡ್ತಾರೆ, ವೇದಿಕೆಯಲ್ಲೇ ಸಿಎಂ ಸಿದ್ದು, ಡಿಕೆಶಿ ಕುಟಕಿದ ಬಿಕೆ ಹರಿಪ್ರಸಾದ್