ಶತ್ರುಗಳಂತೆ ನೋಡ್ತಾರೆ, ವೇದಿಕೆಯಲ್ಲೇ ಸಿಎಂ ಸಿದ್ದು, ಡಿಕೆಶಿ ಕುಟಕಿದ ಬಿಕೆ ಹರಿಪ್ರಸಾದ್
ಸಿಎಂ ಸಿದ್ದು, ಡಿಕೆಶಿಗೆ ಕುಟುಕಿದ ಬಿಕೆ ಹರಿಪ್ರಸಾದ್, ಆಪರೇಶನ್ ಕಸರತ್ತು, ಸಿಟಿ ರವಿ-ಡಿಕೆಶಿ ನಡುವೆ ಜಟಾಪಟಿ, ಲೋಕಸಭೆಗಾಗಿ ಕಾಂಗ್ರೆಸ್ ತಯಾರಿ, ಆತಂಕದಲ್ಲಿ ಬಿಜೆಪಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಇತ್ತೀಚೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿ ಭಾರಿ ಸದ್ದು ಮಾಡಿದ್ದರು. ಬಳಿಕ ಕಾಂಗ್ರೆಸ್ ವೇದಿಕೆಗಳಲ್ಲಿ ಕಾಣಿಸಿಕೊಳ್ಳದ ಬಿಕೆ ಹರಿಪ್ರಸಾದ್ ಇದೀಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸ್ ಜಯಂತಿಯಲ್ಲಿ ಬಿಕೆ ಹರಿಪ್ರಸಾದ್ ಕಾಣಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ವೇದಿಕೆಯಲ್ಲೇ ಬಿಕೆ ಹರಿಪ್ರಸಾದ್, ಪಕ್ಷದ ನಾಯಕರನ್ನು ಕುಟುಕಿದ್ದಾರೆ.