ಅವನತಿ ಅಂಚಿನ ಗುಬ್ಬಿಗಳಿಗೆ ಆಸರೆಯಾದ ಪಕ್ಷಿ ಪ್ರೇಮಿ ಚಂದ್ರು

  • ಅವನತಿ ಅಂಚಿನ ಗುಬ್ಬಿಗಳಿಗೆ ಆಸರೆಯಾದ ಪಕ್ಷಿ ಪ್ರೇಮಿ
  • ಅಳಿವಿನ ಅಂಚಿನಲ್ಲಿರುವ  ಗುಬ್ಬಚ್ಚಿಯಂಥ ಸಂವೇದನಾಶೀಲ ಪಕ್ಷಿ
  • ಸೊಸೈಟಿಯಲ್ಲೇ ಕೃತಕ ಗೂಡುಗಳನ್ನು ನಿರ್ಮಿಸಿರೋ ಚಂದ್ರು
First Published Feb 2, 2022, 1:09 PM IST | Last Updated Feb 2, 2022, 1:12 PM IST

ಚಿಕ್ಕಮಗಳೂರು(ಫೆ.2): ದಿನ ಬೆಳಗಾದರೆ ಚಿಲಿಪಿಲಿ ಎನ್ನುತ್ತಾ ಅಲ್ಲಲ್ಲಿ ಹಾರುವ ಗುಬ್ಬಚ್ಚಿಗಳಾಗಲಿ, ಗುಬ್ಬಚ್ಚಿ ಗೂಡುಗಳಾಗಲಿ ಇತ್ತೀಚಿನ ದಿನಗಳಲ್ಲಿ ಅತಿ ವಿರಳ. ವಿಶಿಷ್ಟ ಧ್ವನಿಯಲ್ಲಿ, ಕ್ಷಣಕಾಲವೂ ಸುಮ್ಮನಿರದೆ ಚಿಂವ್ಗುಡುತ್ತಾ, ಜಿಗಿಯುತ್ತಾ, ಪುಟಿದೇಳುತ್ತಿದ್ದ ಗುಬ್ಬಚ್ಚಿ ಸಂತತಿಯೇ ನಾಪತ್ತೆಯಾಗಿದೆ. ಆದ್ರೆ, ಕಾಫಿನಾಡು ಚಿಕ್ಕಮಗಳೂರಿನ ಹಿರೇಕೊಳಲೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸೊಸೈಟಿ ಇದಕ್ಕೆ ಹೊರತಾಗಿದೆ. ಯಾಕಂದ್ರೆ, ಈ ಸೊಸೈಟಿಯಲ್ಲಿ ನೂರಾರು ಗುಬ್ಬಚ್ಚಿಗಳಿಗೆ ಆಶ್ರಯ ನೀಡಲಾಗಿದೆ. ದಿನವೂ ಅವುಗಳನ್ನ ಹಾರೈಸುತ್ತಾ ಅವುಗಳ ಸಂತತಿಯ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ..ಈ ಗುಬ್ಬಚ್ಚಿ ರಕ್ಷಕ ಈ ಕುರಿತು ಒಂದು ವರದಿ ಇಲ್ಲಿದೆ.

ಕಾಫಿನಾಡು ಚಿಕ್ಕಮಗಳೂರು ನೈಸರ್ಗಿಕ ಸೌಂದರ್ಯದ ಗಿರಿ. ಇಲ್ಲಿನ ಹತ್ತಾರು ಪ್ರಕೃತಿ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಸ್ವರ್ಗವಾಗಿವೆ. ಜೊತೆಗೆ ಅನೇಕ ಪ್ರಾಣಿ, ಪಕ್ಷಿಗಳು ಇಲ್ಲಿನ ನೈಸರ್ಗಿಕ ವಾತಾರವಣ ಜೀವಸೆಲೆಯಾಗಿದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಭಾಗದಲ್ಲೂ ಗುಬ್ಬಚ್ಚಿಯಂಥ ಸಂವೇದನಾಶೀಲ ಪಕ್ಷಿ ಸಂಕುಲ ಅಳಿವಿನ ಅಂಚಿನಲ್ಲಿದ್ದು, ಅಪರೂಪಕ್ಕೊಮ್ಮೆ ಅಲ್ಲೊಂದು, ಇಲ್ಲೊಂದು ಗುಬ್ಬಚ್ಚಿ ನೋಡುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಹೀಗೆ, ಅಳಿವಿನ ಅಂಚಿನಲ್ಲಿದ್ದ ಗುಬ್ಬಚ್ಚಿಗಳಿಗೆ ಹಿರೇಕೊಳಲೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸೊಸೈಟಿ ಆಶ್ರಯ ತಾಣವಾಗಿದೆ. 

ಇಂದು ಗುಬ್ಬಚ್ಚಿ ದಿನ..! ಚಿಲಿಪಿಗುಟ್ಟುತ್ತಿದ್ದ ಪುಟ್ಟ ಹಕ್ಕಿಗಳು ಎಲ್ಲಿ ಹೋದವು..?

ಸುಮಾರು 50 ಕ್ಕೂ ಹೆಚ್ಚು ಕೃತಕ ಗೂಡುಗಳನ್ನ ನಿರ್ಮಿಸಿ, 300ಕ್ಕೂ ಅಧಿಕ ಗುಬ್ಬಚ್ಚಿಯನ್ನ ಸಾಕುತ್ತಾ, ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಸೊಸೈಟಿ ನೌಕರ ಚಂದ್ರು. ಕಳೆದ 36 ವರ್ಷಗಳಿಂದ ಈ ಸೊಸೈಟಿಯಲ್ಲಿ ಕಾರ್ಯನಿರ್ವಹಿಸ್ತಿರೋ ಚಂದ್ರು, ಸುಮಾರು 30 ವರ್ಷಗಳಿಂದ ಗುಬ್ಬಚ್ಚಿಗಳ ಸಂತತಿ ಉಳಿವಿಗೆ ಶ್ರಮಿಸುತ್ತಿದ್ದಾರೆ. ಕೆಲಸದಿಂದ ನಿವೃತ್ತರಾದ್ರೂ ಸೊಸೈಟಿಯ ಆಡಳಿತ ಮಂಡಳಿಯ ಒತ್ತಾಯದ ಮೇರೆಗೆ ಕಳೆದ 4 ವರ್ಷಗಳಿಂದಲೂ ಈ ಕಾಯಕವನ್ನು ಮುಂದುವರಿಸಿದ್ದಾರೆ. ದಿನನಿತ್ಯ ಸೊಸೈಟಿ ಬಾಗಿಲು ತೆಗೆದ ಕೂಡಲೇ ಮನೆಯಿಂದ ತಂದಿರೋ ಅನ್ನ, ಬೇಕರಿಯ ಸಿಹಿ ತಿನಿಸುಗಳು ಹಾಗೂ ಖಾರದ ಪದಾರ್ಥವನ್ನು ತಟ್ಟೆಯಲ್ಲಿ ಹಾಕಿದ ಕೂಡಲೇ ಗುಬ್ಬಚ್ಚಿಗಳು ಬಂದು ತಿನ್ನೋದನ್ನ ನೋಡಿ ಸಂತಸ ಪಡ್ತಿದ್ದಾರೆ.

ವಾಸ್ತು ಟಿಪ್ಸ್: ಮನೆಯಲ್ಲಿ ಗುಬ್ಬಚ್ಚಿ ಗೂಡಿದ್ದರೆ ಅದೃಷ್ಟ ಖುಲಾಯಿಸುತ್ತೆ

ಸೊಸೈಟಿಯಲ್ಲೇ ಕೃತಕ ಗೂಡುಗಳನ್ನು ನಿರ್ಮಿಸಿರೋ ಚಂದ್ರು, ಆರಂಭದಲ್ಲಿ ನಾಲ್ಕೈದು ಇದ್ದ ಗುಬ್ಬಚ್ಚಿಗಳ ಸಂಖ್ಯೆ ಇಂದು 300 ದಾಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗೂಡುಗಳನ್ನ ನಿರ್ಮಿಸಿ ಗುಬ್ಬಚ್ಚಿ ಸಂತತಿಯನ್ನ ಉಳಿಸೋದ್ರ ಜೊತೆ ಅವುಗಳ ಸಂಖ್ಯೆಯನ್ನ ಮತ್ತಷ್ಟು ಹೆಚ್ಚಿಸ್ತೀನಿ ಅಂತಾರೆ ಚಂದ್ರು. ಇನ್ನು ಇವ್ರ ಈ ಕೆಲಸಕ್ಕೆ ಸ್ಥಳಿಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.