Asianet Suvarna News Asianet Suvarna News

ವಿವಾದಗಳ ಸುಳಿಯಲ್ಲಿ ಆದಿಪುರುಷ್‌: ಸಿನಿಮಾದವರು ಕುರಾನ್, ಬೈಬಲ್‌ನಿಂದ ದೂರವಿರಿ ಅಂದಿದ್ದೇಕೆ ಕೋರ್ಟ್‌ ?

ಆದಿಪುರುಷ ಚಿತ್ರತಂಡಕ್ಕೆ ಬೈದು ಬುದ್ಧಿ ಹೇಳಿದೆ ಹೈಕೋರ್ಟ್..? 
ಆದಿಪುರುಷ ನೋಡಿದವರೆಲ್ಲಾ  ಟೀಕಿಸುವಂಥದ್ದೇನಿದೆ ಸಿನಿಮಾದಲ್ಲಿ..? 
ಸಿನಿಮಾ ಶುರುವಾದಾಗಿಂದಲೂ ಎದುರಾಗಿವೆ ಟೀಕೆ.. ಕಟು ಟೀಕೆ!

First Published Jun 30, 2023, 12:34 PM IST | Last Updated Jun 30, 2023, 12:34 PM IST

ಸಾಮಾನ್ಯವಾಗಿ ಒಂದು ಸಿನಿಮಾದ ಬಗ್ಗೆ ಸಿನಿಮಾ ಅಭಿಮಾನಿಗಳು ಮಾತಾಡ್ತಾರೆ ಅಥವಾ ಆ ಸಿನಿಮಾ ತಂಡ ಮಾತಾಡುತ್ತೆ. ಆ ಇಬ್ಬರನ್ನ ಬಿಟ್ಟು, ರಾಜಕಾರಣಿಗಳು ಮಾತಾಡ್ತಾ ಇದಾರೆ ಅಂದ್ರೆ, ಅಲ್ಲೇನೋ, ಕಾಂಟ್ರವರ್ಸಿ ಇದೆ ಅಂತ ಅರ್ಥ. ಆದ್ರೆ, ಈ ಸಲ ಹೈಕೋರ್ಟೇ ಒಂದು ಸಿನಿಮಾಗೆ ಛೀಮಾರಿ ಹಾಕಿದೆ, ಬೈದು ಬುದ್ಧಿ ಹೇಳಿದೆ ಅಂದ್ರೆ, ಆ ಸಿನಿಮಾದಲ್ಲಿ, ಮಾಡಬಾರದ ಮಿಸ್ಟೇಕ್ ಇದೆ ಅಂತಲೇ ಅರ್ಥ. ಈಗ ಆದಿಪುರುಷ ಸಿನಿಮಾಗೆ ಅಲಹಾಬಾದ್ ಹೈಕೋರ್ಟ್ ಬೈದು, ಛೀಮಾರಿ ಹಾಕಿದೆ. ಬುದ್ಧಿವಾದದ ಜೊತೆಗೆ ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದೆ. ಆದಿಪುರುಷ ಅನ್ನೋದು, ಭಾರತದ ಮಹಾಗ್ರಂಥ, ಹಿಂದೂಗಳ ಪರಮಪೂಜ್ಯ ಗ್ರಂಥ, ಭಾರತದ ಪ್ರತಿಯೊಬ್ಬರಿಗೂ ಆದರ್ಶಮಯವಾಗಿರೋ ರಾಮಾಯಣ ಕಥೆ ಆಧಾರವಾಗಿ ನಿರ್ಮಾಣವಾಗಿದ್ದ ಸಿನಿಮಾ.ಪದೇ ಪದೇ ಹಿಂದುಗಳ ತಾಳ್ಮೆಯನ್ನು ಅವರ ಸಹಿಷ್ಣುತೆಯ ಮಟ್ಟವನ್ನು ಪರೀಕ್ಷೆ ಯಾಕೆ ಮಾಡ್ತೀರಿ?. ಅದೃಷ್ಟವಶಾತ್‌ ಹಿಂದುಗಳು ಕಾನೂನು ಉಲ್ಲಂಘನೆ ಮಾಡಿಲ್ಲ. ಅದೇ ಪುಣ್ಯ. ಕುರಾನ್ ಬಗ್ಗೆ ಸಣ್ಣ ದೋವಿದ್ದ ಶಾರ್ಟ್ ಡಾಕ್ಯುಮೆಂಟರಿ ಮಾಡಿದ್ದಿದ್ದರೂ ಅದರ ಪರಿಣಾಮ ಏನಾಗುತ್ತೆ ಎಂಬುದು ನಿಮಗೆ ಅರ್ಥವಾಗುತ್ತಿತ್ತು ಎಂದು ಕೋರ್ಟ್‌ ಹೇಳಿದೆ.

ಇದನ್ನೂ ವೀಕ್ಷಿಸಿ: ಕಟೀಲ್ ವಾರ್ನಿಂಗ್ ಕೊಟ್ಟರೂ ರೇಣುಕಾ ರಾಂಗ್ ಆಗಿದ್ದೇಕೆ..?: ಆರದ ಕಿಚ್ಚು, ತೀರದ ಸಿಟ್ಟು, ಸಿಡಿದೆದ್ದ ಬಿಎಸ್‌ವೈ ಬಂಟ..!

Video Top Stories