ಕಟೀಲ್ ವಾರ್ನಿಂಗ್ ಕೊಟ್ಟರೂ ರೇಣುಕಾ ರಾಂಗ್ ಆಗಿದ್ದೇಕೆ..?: ಆರದ ಕಿಚ್ಚು, ತೀರದ ಸಿಟ್ಟು, ಸಿಡಿದೆದ್ದ ಬಿಎಸ್‌ವೈ ಬಂಟ..!

ಇದು "ರೆಬೆಲ್.. ರಾಂಗ್.. ರೇಣುಕಾ.." RRR ರೋಷಾಗ್ನಿ ಕಥೆ..! 
ಬಿಜೆಪಿ ಸೋಲಿನ ಸೂತ್ರಧಾರ "ಅವರೇ" ಅಂದ್ರು ರೇಣುಕಾಚಾರ್ಯ..!
ಬಿಜೆಪಿ ಸೋಲಿಗೆ ಅಸಲಿ ಕಾರಣ ಬಿಚ್ಟಿಟ್ಟ ರೆಬೆಲ್ ರೇಣುಕಾಚಾರ್ಯ..!

First Published Jun 30, 2023, 12:11 PM IST | Last Updated Jun 30, 2023, 12:11 PM IST

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾನಸಪುತ್ರ, ಕೇಸರಿ ಪಡೆಯ ರೆಬೆಲ್ ಸ್ಟಾರ್ ರೇಣುಕಾಚಾರ್ಯ ಸಿಡಿದು ನಿಂತಿದ್ದಾರೆ. ಪಕ್ಷದ ನಾಯಕರ ವಿರುದ್ಧವೇ ಗುಟುರು ಹಾಕ್ತಿದ್ದಾರೆ. ಅಂದ ಹಾಗೆ ರಾಜ್ಯ ಬಿಜೆಪಿಯಲ್ಲಿ ಅಂತರ್ಯುದ್ಧ ಶುರುವಾಗಿ ತುಂಬಾ ದಿನಗಳಾದ್ವು. ಇಷ್ಟು ದಿನ ಅಂತರ್ಯುದ್ಧ ಅಖಾಡದಲ್ಲಿ ಅಬ್ಬರಿಸ್ತಾ ಇದ್ದವರು ಒಂದೇ ಬಣಕ್ಕೆ ಸೇರಿದವರು. ಸಿ.ಟಿ ರವಿ, ಪ್ರತಾಪ್ ಸಿಂಹ, ಯತ್ನಾಳ್, ಸೋಮಣ್ಣ.. ಇವ್ರೆಲ್ಲಾ ಚುನಾವಣೆ ಸೋಲಿನ ಬೆನ್ನಲ್ಲೇ ಆಡಿದ ಮಾತು ಬಿಜೆಪಿಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದು ಸುಳ್ಳಲ್ಲ. ಈ ಎಲ್ಲಾ ಕಿಡಿ ಮಾತುಗಳ ಪರೋಕ್ಷ ಟಾರ್ಗೆಟ್ ರಾಜಾಹುಲಿ ಯಡಿಯೂರಪ್ಪ ಅನ್ನೋದು ಕನಿಷ್ಠ ರಾಜಕೀಯ ಜ್ಞಾನ  ಇರೋ ಎಂಥವರಿಗಾದ್ರೂ ಅರ್ಥ ಆಗತ್ತೆ. ಜೊತೆಗೆ ಇದನ್ನು ಸ್ವತಃ ಬಿಜೆಪಿಯವರೇ ಹೇಳ್ತಾರೆ. ಆಶ್ಚರ್ಯ ಏನಂದ್ರೆ ವಿರೋಧಿ ಬಣದವರು ಇಷ್ಟೆಲ್ಲಾ ಮಾತಾಡ್ತಾ ಇದ್ರೂ, ಯಡಿಯೂರಪ್ಪಮನವರ ಕಡೆಯಿಂದ ಕೌಂಟರ್ ಅಟ್ಯಾಕ್ ಶುರುವಾಗಿರ್ಲಿಲ್ಲ. ಆದ್ರೆ ಈಗ ಶುರುವಾಗಿದೆ. ಸ್ವತಃ ಬಿಎಸ್‌ವೈ ಬಂಟ ರೇಣುಕಾಚಾರ್ಯ ರೆಬೆಲ್ ಆಗಿ, ರಾಂಗ್ ಆಗಿ ಅಬ್ಬರಿಸೋದಕ್ಕೆ ಶುರು ಮಾಡಿದ್ದಾರೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸಿದ್ದು ಯಾಕೆ ಅನ್ನೋ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಕೌಂಟರ್ ಅಟ್ಯಾಕ್ ಶುರು ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ: ಒಂದು ದೇಶ, ಒಂದೇ ಕಾನೂನು ಬೇಕಾ ಬೇಡ್ವಾ ?: ಮೋದಿ ಮಾತಿಗೆ ಮುಗಿವಿದ್ದ ವಿಪಕ್ಷಗಳು

Video Top Stories