ಕೋತಿಯ ಗುಡಿಯ ನೋಡಿರಣ್ಣಾ! 'ಚಿಂಟು'ಗಾಗಿ ಗುಡಿ ಕಟ್ಟಿಸಲು ಮುಂದಾದ ಸಾರಾ ಮಹೇಶ್!

ಮೈಸೂರು (ಜ. 26): ಮಾಜಿ ಸಚಿವ ಸಾರಾ ಮಹೇಶ್ ದೇಗುಲವೊಂದನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಹಾಗಂತ ಅವರು ತಮ್ಮ ಮನೆ ದೇವರು, ಇಷ್ಟದ ದೇವರ ಗುಡಿ ಕಟ್ಟಿಸುತ್ತಿಲ್ಲ. ಎಲ್ಲಿಂದಲೋ  ಬಂದು ತಮ್ಮ ತೋಟದಲ್ಲಿ ಸೇರಿಕೊಂಡಿದ್ದ ಕೋತಿಯ ನೆನಪಿಗಾಗಿ  ಲಕ್ಷಾಂತರ ಹಣ ಖರ್ಚು ಮಾಡಿ ದೇಗುಲ ನಿರ್ಮಾಣ ಮಾಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರು (ಜ. 26):  ಮಾಜಿ ಸಚಿವ ಸಾರಾ ಮಹೇಶ್ ದೇಗುಲವೊಂದನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಹಾಗಂತ ಅವರು ತಮ್ಮ ಮನೆ ದೇವರು, ಇಷ್ಟದ ದೇವರ ಗುಡಿ ಕಟ್ಟಿಸುತ್ತಿಲ್ಲ. ಎಲ್ಲಿಂದಲೋ ಬಂದು ತಮ್ಮ ತೋಟದಲ್ಲಿ ಸೇರಿಕೊಂಡಿದ್ದ ಕೋತಿಯ ನೆನಪಿಗಾಗಿ ಲಕ್ಷಾಂತರ ಹಣ ಖರ್ಚು ಮಾಡಿ ದೇಗುಲ ನಿರ್ಮಾಣ ಮಾಡುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿದ ಕೋತಿ; ಕಪಿ ಚೇಷ್ಟೆಗೆ ಪೊಲೀಸರು ಕಕ್ಕಾಬಿಕ್ಕಿ

ಕಳೆದ 8-10 ವರ್ಷಗಳಿಂದ ಪ್ರೀತಿಯಿಂದ ಸಾಕಿದ್ದ ಚಿಂಟು ಹೆಸರಿನ ಕೋತಿ ಇತ್ತೀಚೆಗೆ ಸಾರಾ.ಮಹೇಶ್ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕೊನೆಯುಸಿರೆಳೆದಿತ್ತು. ಆಗ ಸಿಂಗಾಪುರ್ ಪ್ರವಾಸದಲ್ಲಿದ್ದ ಶಾಸಕರು ತಮ್ಮ ಪ್ರವಾಸ ಮೊಟಕು ಮಾಡಿ ವಾಪಸ್ ಬಂದು ಅದರ ಅಂತ್ಯಕ್ರಿಯೆ ಮಾಡಿದ್ದರು.

ಚಿಂಟು ನೆನಪಿಗಾಗಿ ಈಗ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಫಾರಂ ಹೌಸ್ ನಲ್ಲಿ ದೇವಾಲಯ ನಿರ್ಮಾಣ ಆಗ್ತಿದೆ. ಸುಮಾರು 20ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡುತ್ತಿದ್ದು, ದೇವಾಲಯ ನಿರ್ಮಾಣ ಕಾರ್ಯ ಶೇಕಡ 70 ರಷ್ಟು ಮುಕ್ತಾಯವಾಗಿದೆ. ಸಾರಾ.ಮಹೇಶ್​ ಅವರನ್ನು ಇಷ್ಟರ ಮಟ್ಟಿಗೆ ಕಾಡಿರುವ ಅಪರೂಪದ ಮನಮಿಡಿಯುವ ಕಥೆ ಇಲ್ಲಿದೆ ನೋಡಿ..! 

Related Video