ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿದ ಕೋತಿ; ಕಪಿ ಚೇಷ್ಟೆಗೆ ಪೊಲೀಸರು ಕಕ್ಕಾಬಿಕ್ಕಿ

ಕೆಲತಿಂಗಳ ಹಿಂದೆ ಪೊಲೀಸ್ ಠಾಣೆಗೆ ನಾಗರಾಜ ಭೇಟಿ ನೀಡಿ, ಪೊಲೀಸರಿಗೇ ಹೆದರಿಸಿದ್ದ ಘಟನೆ ನಿಮಗೆ ನೆನಪಿರಬಹುದು. ಈಗ,  ನಾಗಪ್ಪನಿಗಿಂತ ನಾನೇನು ಕಮ್ಮಿಯಿಲ್ಲ ಎಂದು ತೋರಿಸೋದಿಕ್ಕೆ ಹನುಮ ಮುಂದಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.  
 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಜ.06): ಕೆಲತಿಂಗಳ ಹಿಂದೆ ಪೊಲೀಸ್ ಠಾಣೆಗೆ ನಾಗರಾಜ ಭೇಟಿ ನೀಡಿ, ಪೊಲೀಸರಿಗೇ ಹೆದರಿಸಿದ್ದ ಘಟನೆ ನಿಮಗೆ ನೆನಪಿರಬಹುದು. ಈಗ, ನಾಗಪ್ಪನಿಗಿಂತ ನಾನೇನು ಕಮ್ಮಿಯಿಲ್ಲ ಎಂದು ತೋರಿಸೋದಿಕ್ಕೆ ಹನುಮ ಮುಂದಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪೊಲೀಸ್ ಠಾಣೆಗೆ ಕಪಿರಾಯ ಏಕಾಏಕಿ ಭೇಟಿ ನೀಡಿ ದಾಂಧಲೆ ಎಬ್ಬಿಸಿದ್ದಾನೆ. ಪೊಲೀಸರ ಚೇರು, ಟೇಬಲ್ ಗಳ ಮೇಲೆ ರಾಜಾರೋಷವಾಗಿ ಓಡಾಡಿದ್ದಾನೆ.

ಇದನ್ನೂ ಓದಿ | ನಂಬಿದ್ರೆ ನಂಬಿ! ಶಿವಮೊಗ್ಗದಲ್ಲಿ ಕಪಿಚೇಷ್ಟೆ ಮಾಡಿದ 70 ಮಂಗಗಳು ಅರೆಸ್ಟ್!...

 ಮಂಗನ ಆಟಕ್ಕೆ ಪೊಲೀಸರು ಸುಸ್ತೋ ಸುಸ್ತು, ಅತನ ಚೇಷ್ಟೆಗಳನನ್ಉ ರೆಕಾರ್ಡ್ ಕೂಡಾ ಮಾಡಿದ್ದಾರೆ. ಅದಾದ ಬಳಿಕ ಪೊಲೀಸ್ ಠಾಣೆಯ ದೇವರ ಪೋಟೋ ಬಳಿ ಹೋಗಿ ಮಂಗ ಕುಳಿತುಕೊಂಡಿದೆ. ದೇವರ ಬಳಿ ಹೋಗಿ ಕೂತ ಮಂಗನನ್ನು ಕಂಡು ಪೊಲೀಸರು ದೈವ ಪರವಶರಾದರು.

Related Video