ಮಹಾರಾಷ್ಟ್ರದಲ್ಲಿ ಉಲ್ಟಾ ಆಟೋ ರೇಸ್: ಅಬ್ಬಾ ನಿಜಕ್ಕೂ ಇದು ಹೇಗೆ ಸಾಧ್ಯ?
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಆಟೋ ರೇಸ್ ಇಡಲಾಗಿತ್ತು. ಅಲ್ಲಿ ಆಟೋವನ್ನು ಉಲ್ಟಾ ಓಡಿಸಿದವನೇ ಮಹಾಶೂರ. ಚೂರೇ ಚೂರು ಮಿಸ್ಸಾದ್ರೂ ದೊಡ್ಡ ಎಡವಟ್ಟು ಆಗೋದು ಗ್ಯಾರಂಟಿ.
ಪ್ರತಿವರ್ಷ ಮಹಾಷ್ಟ್ರದ ಸಾಂಗ್ಲಿಯ ಬಳಿಯ ಹರಿಪುರದಲ್ಲಿ ಉಲ್ಟಾ ಆಟೋ ರೇಸ್ ಏರ್ಪಡಿಸಲಾಗುತ್ತದೆ. ಇದನ್ನು ನೋಡಿದವರು ಶಾಕ್ ಆಗೋದು ಖಂಡಿತ. ಇದನ್ನು ನೋಡಿದವರಿಗೆ ರೇಸ್ ಹೀಗೂ ಇರುತ್ತಾ ಎಂಬ ಪ್ರಶ್ನೆ ಮೂಡುವುದು ಸಹಜ. ಇದೇ ಈ ರೇಸ್'ನ ಸ್ಪೆಷಾಲಿಟಿ. ಈ ರೇಸ್'ನ ಮೇನ್ ಕಂಡೀಷನ್ ಏನು ಅಂದ್ರೆ, ಆಟೋಗಳನ್ನು ಡ್ರೈವರ್ ಉಲ್ಟಾ ಓಡಿಸಬೇಕು. ಹಾಗೇ ಓಡಿಸಿ ಫಸ್ಟ್ ಬಂದ್ರೆ ಬಂಪರ್ ಬಹುಮಾನ ಸಿಗುತ್ತದೆ. ಮಳೆಗಾಲದಲ್ಲಿ ಗುಂಡಿಗಳ ಮಧ್ಯೆ ಪ್ರಯಾಣಿಕರಿಗೆ ಏನೂ ತೊಂದರೆ ಆಗದಂತೆ ಆಟೋ ಓಡಿಸುವುದು ದೊಡ್ಡ ಚಾಲೆಂಜ್. ಹೀಗಿರುವಾಗ ಈ ರೇಸ್ ನಿಜಕ್ಕೂ ದೊಡ್ಡ ಸಾಹಸಮಯ ಆಗಿದ್ದು, ಸದಾ ಆಟೋ ಓಡಿಸಿ ಓಡಿಸಿ ದಣಿದ ಚಾಲಕರಿಗೆ ಇದು ಥ್ರಿಲ್ ನೀಡಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಾರಿನ ಟಾಪ್ ಮೇಲೆ ರೊಮ್ಯಾನ್ಸ್: ಲಕ್ನೋದಲ್ಲಿ ಪ್ರೇಮದ ನಶೆಯಲ್ಲಿ ಜೋಡಿಯ ಹುಚ್ಚಾಟ