Asianet Suvarna News Asianet Suvarna News

ಮಳೆಗಾಲದಲ್ಲಿ ಈ ರಸ್ತೆಗಳು ಡೇಂಜರ್‌.. ಡೇಂಜರ್‌: 65 ಸ್ಥಳಗಳಲ್ಲಿ ಭಾರೀ ನೀರು, ಟ್ರಾಫಿಕ್‌ ಪೊಲೀಸರ ಮಾಹಿತಿ

ಸಿಲಿಕಾನ್‌ ಸಿಟಿ ಮಂದಿಗೆ ಕಂಟಕವಾಗುತ್ತಾ ಮಳೆಗಾಲ?
ಡೇಂಜರ್‌ ಸ್ಪಾಟ್‌ ಬಗ್ಗೆ ಪೊಲೀಸರಿಂದ ಮಾಹಿತಿ ಸಂಗ್ರಹ
ಅತಿ ಹೆಚ್ಚು ನೀರು ಸಂಗ್ರಹವಾಗುವ ಸ್ಥಳಗಳ ಗುರುತು
 

ಈ ಬಾರಿಯ ಮಳೆಗಾಲ ಸಿಲಿಕಾನ್‌ ಸಿಟಿ ಜನತೆಗೆ ಕಂಟಕವಾಗುವ ಸಾಧ್ಯತೆ ಇದೆ. ಏಕೆಂದರೆ ಮಳೆಗಾಲದಲ್ಲಿ ರಸ್ತೆಯಲ್ಲಿನ ಗುಂಡಿಗಳು ಅವಾಂತರವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಟ್ರಾಫಿಕ್‌ ಪೊಲೀಸರು ನೀರು ಸಂಗ್ರಹವಾಗುವ ಜಾಗಗಳನ್ನು ಗುರುತು ಮಾಡಿದ್ದಾರೆ. ಬಹುತೇಕ ಅಂಡರ್‌ ಪಾಸ್‌ಗಳಲ್ಲಿ ನೀರು ಸಂಗ್ರಹವಾಗಲಿದೆ. ಈ ಪಟ್ಟಿಯನ್ನು ಬಿಬಿಎಂಪಿಗೆ ಪೊಲೀಸ್‌ ಇಲಾಖೆ ಕಳುಹಿಸಿದೆ. ಅಲ್ಲದೇ ಆದಷ್ಟು ಬೇಗ  ಈ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ. ಬೆಂಗಳೂರಿನ 65 ಸ್ಥಳಗಳಲ್ಲಿ ನೀರು ಸಂಗ್ರಹವಾಗಲಿದೆ. ನೀರು ತುಂಬಿದ ತಕ್ಷಣ ಪಂಪಿಂಗ್‌ ಮಾಡಬೇಕಾಗಿದೆ. 

ಇದನ್ನೂ ವೀಕ್ಷಿಸಿ: ಸೋಮೇಶ್ವರ ನೈತಿಕ ಪೊಲೀಸ್‌ ಗಿರಿ ಹಿಂದಿದ್ಯಾ 'ಕೇರಳ ಸ್ಟೋರಿ' ಕಥೆ?: ಕೇಸ್‌ನ ಸಮಗ್ರ ತನಿಖೆಗೆ ಮಹಿಳಾ ಸಂಘಟನೆ ಒತ್ತಾಯ