Asianet Suvarna News Asianet Suvarna News

ಸೋಮೇಶ್ವರ ನೈತಿಕ ಪೊಲೀಸ್‌ ಗಿರಿ ಹಿಂದಿದ್ಯಾ 'ಕೇರಳ ಸ್ಟೋರಿ' ಕಥೆ?: ಕೇಸ್‌ನ ಸಮಗ್ರ ತನಿಖೆಗೆ ಮಹಿಳಾ ಸಂಘಟನೆ ಒತ್ತಾಯ

ಸೋಮೇಶ್ವರ ಬೀಚ್‌ ಬಳಿ ನೈತಿಕ ಪೊಲೀಸ್‌ ಗಿರಿ
ಈ ಪ್ರಕರಣದ ಹಿಂದಿದ್ಯಾ ಕೇರಳ ಸ್ಟೋರಿ ಕಥೆ?
ತನಿಖೆ ನಡೆಸುವಂತೆ ಮಹಿಳಾ ಸಂಘಟನೆ ಒತ್ತಾಯ
 

ಮಂಗಳೂರು:  ಸೋಮೇಶ್ವರ ಬೀಚ್‌ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧಿಸಿ ಉಳ್ಳಾಲ ಪೊಲೀಸರು ಅಪ್ರಾಪ್ತ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಚರ್ಚೆ ಶುರುವಾಗಿದ್ದು, ಇದರ ಹಿಂದೆ ಕೇರಳ ಸ್ಟೋರಿ ಕಥೆ ಇದೆಯಾ ಎಂಬ ಅನುಮಾನ ಮೂಡಿದೆ. ಯುವತಿಯರ ಪೋಷಕರನ್ನು ಠಾಣೆಗೆ ಕರೆಸುವಂತೆ ಮಹಿಳೆಯರು ಪಟ್ಟು ಹಿಡಿದ್ದಾರೆ. ಈ ಪ್ರಕರಣದ ಸಮಗ್ರ ತನಿಖೆಗೆ ಮಹಿಳಾ ಸಂಘಟನೆ ಒತ್ತಾಯಿಸಿದೆ. ಅಲ್ಲದೇ ವಿದ್ಯಾರ್ಥಿನಿಯರನ್ನು ಪೊಲೀಸ್‌ ಠಾಣೆಗೆ ಕರೆಸುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಯುವತಿಯರನ್ನು ಕರೆಸದಿದ್ದರೇ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಎರಡೂ ಕಡೆಯಿಂದ ತನಿಖೆ ನಡೆಯಬೇಕು ಎಂಬುದು ಮಹಿಳೆಯರ ಆಗ್ರಹವಾಗಿದೆ.

ಇದನ್ನೂ ವೀಕ್ಷಿಸಿ: ದೇಶ ಕಂಡ ದಶಮಾನದ ಮಹಾದುರಂತ: ಏನಿದು ಕವಚ ತಂತ್ರಜ್ಞಾನ?.. ಬಾಲಸೋರ್ ಅಪಘಾತ ಏಕೆ ತಪ್ಪಲಿಲ್ಲ ?