ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಸಾಧಕರಿಗೆ ಸುವರ್ಣ ಸಾಧಕರು ಪ್ರಶಸ್ತಿ ಪ್ರದಾನ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ವತಿಯಿಂದ ಈ ಬಾರಿ ಹಲವು ಸಾಧಕರಿಗೆ ಸುವರ್ಣ ಸಾಧಕರು ಪ್ರಶಸ್ತಿಯನ್ನು ನೀಡಲಾಗಿದೆ.
 

First Published Feb 26, 2024, 10:51 AM IST | Last Updated Feb 26, 2024, 10:51 AM IST

ಪ್ರತಿವರ್ಷ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ವತಿಯಿಂದ ಸಾಮಾಜಕ್ಕೆ ಕೊಡುಗೆ ನೀಡಿದ ಹಲವು ಸೇವಕರನ್ನು ಗೌರವಿಸಲಾಗುತ್ತದೆ. ಅದರಂತೆ ಈ ಬಾರಿಯೂ ಸಮಾಜಕ್ಕೆ ಕೊಡುಗೆ ನೀಡಿದ ಹಲವರನ್ನು ಗುರುತಿಸುವ ಕಾರ್ಯ ನಡೆದಿದೆ. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು. ಸರ್ಕಾರಿ ಕೆಲಸ ಬಿಟ್ಟು ಜನಸೇವೆಯಲ್ಲಿ ತೊಡಗಿರುವ ಬೀದರ್‌ನ ಯುವ ನಾಯಕರಾದ ಚನ್ನಬಸವಣ್ಣ ಬಳತೆ ಅವರಿಗೆ 2024ರ ಸುವರ್ಣ ಸಾಧಕರು ಪ್ರಶಸ್ತಿಯನ್ನು ನೀಡಲಾಗಿದೆ. ವಿಜಯಪುರದಲ್ಲಿ ಎಕ್ಸಲೆಂಟ್‌ ಗ್ರೂಪ್‌ ಆಫ್‌ ಸಂಸ್ಥೆ ಮತ್ತು ಶ್ರೀ ವೇದಾ ಆಕಾಡಮಿ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಶಿವಾನಂದ ಕೆಲೂರ್‌ ಅವರಿಗೆ 2024ನೇ ಸಾಲಿನ ಸುವರ್ಣ ಸಾಧಕರು ಪ್ರಶಸ್ತಿಯನ್ನು ನೀಡಲಾಗಿದೆ. ಇವರಲ್ಲದೇ ಹಲವರಿಗೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸುವರ್ಣ ಸಾಧಕರು ಪ್ರಶಸ್ತಿಯನ್ನು ನೀಡಲಾಗಿದೆ.

ಇದನ್ನೂ ವೀಕ್ಷಿಸಿ:  ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ವಿಜಯಪುರದ ಡಾ. ಶಿವಾನಂದ ಕೆಲೂರ್‌

Video Top Stories