ಜ್ಞಾನವಾಪಿ ಮಸೀದಿಯಲ್ಲಿ ಅಕ್ಬರ್ ಭಾವೈಕ್ಯತೆಗಾಗಿ ಶಿವಲಿಂಗ ಇಟ್ಟಿದ್ನಾ!? ಮಂದಿರ ಒಡೆದು ಮಸೀದಿ ಕಟ್ಟಲಾಯ್ತಾ ?
ಅಯೋಧ್ಯೆ ಮುಗೀತು ಇದೀಗ ಕಾಶಿ ಮಸೀದಿ ಸತ್ಯಗಳು ಹೊರಬರುತ್ತಿವೆ. ಇದರಿಂದ ಕಾಶಿ, ಮಥುರಾದಲ್ಲಿ ತೀವ್ರವಾಗುತ್ತಾ ಮಂದಿರ-ಮಸೀದಿ ಕದನ? ಮುಸ್ಲಿಂ ದಾಳಿಕೋರರು ಭಾರತೀಯ ಮುಸ್ಲಿಮರಿಗೆ ಆದರ್ಶವಾ? ಎಂಬ ಹಲವಾರು ವಿಷಯಗಳ ಬಗ್ಗೆ ವಿಕ್ರಮ್ ಫಡ್ಕೆ ಮತ್ತು ಶಾಫಿ ಸಾದಿ ಮಾತನಾಡಲಿದ್ದಾರೆ.
ಭಾವೈಕ್ಯತೆ ಎಂಬುದು ಸತ್ಯ ಎಂಬ ಅಡಿಪಾಯದ ಮೇಲೆ ನಿಲ್ಲಬೇಕು. ಸುಳ್ಳಿನ ಮೇಲೆ ಅಲ್ಲ. ಕೋರ್ಟ್‌ನಲ್ಲಿ ಆಧಾರಗಳ ಮೇಲೆ ವಿಚಾರಣೆ ನಡೆಯುತ್ತದೆಯೋ ಹೊರತು ಕಲ್ಪನೆಗಳ ಮೇಲೆ ಅಲ್ಲ. ಜೌರಂಗಜೇಬ್(Aurangzeb) ಸಂಭಾಜಿಯನ್ನು ಚಿತ್ರಹಿಂಸೆ ಕೊಟ್ಟು ಕೊಂದಿದ್ದಾನೆ. ಜ್ಞಾನವಾಪಿ ಮಸೀದಿ(Gyanvapi Mosque) ವಿಚಾರದಲ್ಲಿ ಹಿಂದೂಗಳು ಕೂತು ಮಾತನಾಡಲು ಸಿದ್ಧರಿದ್ದಾರೆ. ಇತಿಹಾಸ ಎಂಬುದು ತಿಳಿಯುವುದು ಪುರಾವೆಗಳಿಂದ. ಹೊಸ ಹೊಸ ಪುರಾವೆಗಳು ಸಿಕ್ಕ ಹಾಗೆ ನಾವು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ವಿಕ್ರಮ್ ಫಡ್ಕೆ(Vikram Phadke) ಹೇಳುತ್ತಾರೆ. ಅಬ್ದುಲ್ ಕಲಾಂ ಎಲ್ಲಾರಿಗೂ ರೋಲ್ ಮಾಡೆಲ್. ಶಿಶುನಾಳ ಶರೀಫರು ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಚರಿತ್ರೆಯನ್ನು ಚರಿತ್ರೆಯಾಗಿ ನೋಡಿ ಎಂದು ಶಾಫಿ ಸಾಧಿ(Shafi Sadi) ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: ಇತಿಹಾಸಕಾರರಾಗಿ ರಾಮಮಂದಿರವನ್ನ ಹೇಗೆ ನೋಡ್ತಿರಿ..? ಮಸೀದಿ ಕೆಳಗೆ ಮಂದಿರವಿತ್ತು? ಅದು ಯಾವುದು ?