ತೆರಿಗೆ ತಾರತಮ್ಯ ಹೆಸರಲ್ಲಿ ಉತ್ತರ-ದಕ್ಷಿಣ ರಾಜಕೀಯ! ಮೋದಿ v/s ರಾಹುಲ್ ಕದನದಲ್ಲಿ ಯಾರು ಯಾರ ಕಡೆ ?
ಏಷ್ಯಾನೆಟ್ ಸುವರ್ಣ ನ್ಯೂಸ್‌ನ ನ್ಯೂಸ್ ಅವರ್ ಸ್ಪೆಷಲ್‍ನಲ್ಲಿ ಹಲವಾರು ವಿಷಯಗಳ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದಾರೆ.
ತೆರಿಗೆ ತಾರತಮ್ಯದ ಹೆಸರಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ರಾಜಕೀಯ ನಡೆಯುತ್ತಿದೆ. ಈ ಬಗ್ಗೆ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ನಮ್ಮ ಶೇರು ನಮಗೆ ಕೊಟ್ರೆ, ಅವರಿಗೆ ಏನು ಕಮ್ಮಿ ಆಗುವುದಿಲ್ಲ. ಬೇರೆ ರಾಜ್ಯದಿಂದ ತಗೊಂಡು ಹೋಗಿ ಮತ್ತೊಂದು ರಾಜ್ಯಕ್ಕೆ ಕೊಡೋದು ಸರಿಯಲ್ಲ. ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರಬೇಕು ಎಂಬ ಡಿಕೆ ಸುರೇಶ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲ್ಲ ಎಂದು ಸಂತೋಷ್ ಲಾಡ್ ಹೇಳುತ್ತಾರೆ.
ಅಲ್ಲದೇ ಮಾಧ್ಯಮದವರು ಪ್ರಧಾನಿ ಮೋದಿಯವರನ್ನು ತೋರಿಸಿದ ಹಾಗೆ, ರಾಹುಲ್ ಗಾಂಧಿಯನ್ನು ತೋರಿಸಿ. ಪ್ರಶ್ನೆಯನ್ನು ಕೇಳಿದ್ರೆ ಕಾಡಿದ ಹಾಗೆ ಅಲ್ಲ. ಈಗ ಪ್ರಧಾನಿ ಮೋದಿಯವರಿಗೆ ಅನುಕೂಲವಾದ ಪರಿಸ್ಥಿತಿ ಇದೆ. ರಾಹುಲ್ ಗಾಂಧಿಯವರು ಒಬ್ಬ ಹಮಾಲಿ ಪ್ರಶ್ನೆ ಕೇಳಿದ್ರು ಉತ್ತರ ಕೊಡುತ್ತಾರೆ. ಆದ್ರೆ ಪ್ರಧಾನಿ ಮೋದಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಸಂತೋಷ್ ಲಾಡ್ ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: ಜ್ಞಾನವಾಪಿ ಮಸೀದಿಯಲ್ಲಿ ಅಕ್ಬರ್ ಭಾವೈಕ್ಯತೆಗಾಗಿ ಶಿವಲಿಂಗ ಇಟ್ಟಿದ್ನಾ!? ಮಂದಿರ ಒಡೆದು ಮಸೀದಿ ಕಟ್ಟಲಾಯ್ತಾ ?