ನವರಾತ್ರಿಯ ಈ ಒಂಭತ್ತು ದಿನಗಳ ಮಹತ್ವವೇನು..? ನವಶಕ್ತಿ ಸ್ವರೂಪಗಳ ವೈಭವ ದಸರಾ ಉತ್ಸವ..!
ನವರಾತ್ರಿ - ನವಶಕ್ತಿಯರ ವೈಭವ ಕಣ್ತುಂಬಿಕೊಳ್ಳಿ..!
ನವರಾತ್ರಿ ದೇವಿಯ ಒಂಭತ್ತು ಸ್ವರೂಪದ ಮಹತ್ವ..!
ಯಾವ ದಿನ ಯಾವ ದೇವಿಯ ಪೂಜೆ ಮಾಡಬೇಕು..?
ನವರಾತ್ರಿಯ ಮೂರನೇ ದಿನ ಚಂದ್ರಘಂಟ ದೇವಿಯ ಪೂಜೆ ಮಾಡಲಾಗುತ್ತದೆ. ಸಿಂಹದ ಮೇಲೊಬ್ಬ ದೇವಿ, ಆ ದೇವಿಗೆ ಹತ್ತು ಕೈ.. ಒಂದೊಂದ್ ಕೈಯಲ್ಲೂ ಒಂದೊಂದ್ ಆಯುಧ, ಶಸ್ತ್ರಾಸ್ತ್ರ, ಹೂವು.. ನವರಾತ್ರಿಯ ಮೂರನೇ ದಿನ ಆರಾಧನೆ ಮಾಡಿಸ್ಕೊಳೋ ಈ ದೇವತೆ ಹೆಸ್ರು ಚಂದ್ರಘಂಟ.. ಹಣೆ ಮೇಲೆ, ಘಂಟೆಯಾಕಾರದಲ್ಲಿ ಚಂದ್ರಾಕೃತಿ ಇರೋದ್ರಿಂದ ಆ ಹೆಸ್ರು.. ಗಂಡ ಹೆಂಡತಿ ಹೆಂಗಿರ್ಬೇಕು ಅನ್ನೋಕೆ, ಈ ದೇವಿನೇ ದಿ ಬೆಸ್ಟ್ ಎಕ್ಸಾಂಪಲ್.. ಪಾರ್ವತಿ ತಪಸ್ಸಿಗೆ ಮೆಚ್ಚಿದ ಶಿವ, ಮದುವೆ ಆಗೋಕ್ ಒಪ್ಕೊಳ್ತಾನೆ.. ಪರ್ವತರಾಜನ ಮನೇಲಿ ಅದ್ದೂರಿಯಾಗ್ ಮದ್ವೆಗ್ ರೆಡಿಯಾಗಿದ್ರೆ, ಶಿವ, ಮಾತ್ರ, ಅವನ ನಾರ್ಮನ್ ಅಟೈರ್ ಅಲ್ಲೇ ಬರ್ತಾನೆ.. ಗಜಚರ್ಮಾಂಬರನಾಗಿ, ಸ್ಮಶಾನವಾಸಿಯಾಗಿ, ಕೈಲೊಂದ್ ಕಪೋಲ ಹಿಡ್ಕೊಂಡ್ ಬರ್ತಾನೆ. ಅವ್ನ್ ಹಿಂದೆ ಅವ್ನ್ ಭೂತಗಣ, ಋಷಿಗಣ ಕೂಡ ಬರುತ್ತೆ.. ಒಬ್ರಿಗಿಂತಾ ಒಬ್ರ್ ವಿಚಿತ್ರವಾಗಿರ್ತಾರೆ,.. ಇದನ್ ನೋಡಿ-ದೇವತಗಳ ನೆಂಟ್ರಾದ್ರೇನು? ನೆಂಟ್ರು ನೆಂಟ್ರೆ ತಾನೆ, ನಗಾಡ್ತಾರೆ.. ತನ್ ಗಂಡನ್ ನೋಡಿ, ಜನ ನಗ್ಬಾರ್ದು ಅಂತ, ಪಾರ್ವತಿ ಈ ಭೀಕರ ರೂಪ ತಾಳ್ತಾಳೆ.. ಇದನ್ನೇ ಡಿವಿಜಿ, ಹೈಮವತಿ ಶಿವೆ ತಾನೇ ಕಾಳಿ ಚಂಡಿಕೆಯಂತೆ-ಪ್ರೇಮ ಘೋರಗಳೊಂದೆ, ಮಂಕುತಿಮ್ಮ ಅಂತ ಹೇಳಿದಾರೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ವಿಜಯದ ಸಂಕೇತವಾದ ವಿಜಯದಶಮಿ ಇದ್ದು, ಇದರ ಮಹತ್ವವೇನು ಗೊತ್ತಾ ?