Today Horoscope: ಇಂದು ವಿಜಯದ ಸಂಕೇತವಾದ ವಿಜಯದಶಮಿ ಇದ್ದು, ಇದರ ಮಹತ್ವವೇನು ಗೊತ್ತಾ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಮಂಗಳವಾರ, ದಶಮಿ ತಿಥಿ, ಧನಿಷ್ಠ ನಕ್ಷತ್ರ.

ವಿಜಯದಶಮಿ ಜಯದ ಸಂಕೇತವಾಗಿದೆ. ಹೀಗಾಗಿ ಈ ದಿನ ಯಾವುದೇ ಕೆಲಸವನ್ನಾದ್ರೂ ನೀವು ಮಾಡಬಹುದು. ಈ ದಿನ ತಾಯಿ ರಾಕ್ಷಸರನ್ನು ವಧಿಸಿ, ವಿಜಯಮಾಲೆಯನ್ನು ಹಾಕಿದ್ದರಿಂದ ಇಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಮಿಥುನ ರಾಶಿಯವರು ಈ ದಿನ ವಾದಗಳನ್ನು ಮಾಡದಿರುವುದು ಒಳಿತು.ಸ್ವಲ್ಪ ಉದರ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಪೂಜಾ ಕಾರ್ಯಗಳಲ್ಲಿ ಭಾಗಿಯಾಗುತ್ತೀರಿ. ಮನಸ್ಸಿಗೆ ಸ್ವಲ್ಪ ಪೆಟ್ಟು ಬೀಳುವ ಸಾಧ್ಯತೆ ಇದೆ. ಇಂದು ಈ ರಾಶಿಯವರು ಲಲಿತಾ ಸಹಸ್ರನಾಮವನ್ನು ಪಠಿಸಿ.

ಇದನ್ನೂ ವೀಕ್ಷಿಸಿ: NewsHour ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಗೆ ಅಮೆರಿಕ ಮಾತುಕತೆ, ಕತಾರ್ ಮೂಲಕ ಒತ್ತಡ!

Related Video