Santosh Lad: ಸಂತೋಷ್‌ ಲಾಡ್‌ಗೆ 49ನೇ ಬರ್ತ್‌ ಡೇ ಸಂಭ್ರಮ: ಬಸವಣ್ಣ, ಅಂಬೇಡ್ಕರ್‌ ಕುರಿತ ಗೀತೆಗಳ ಬಿಡುಗಡೆ !

ಸಚಿವ ಸಂತೋಷ್‌ ಲಾಡ್‌ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು.
 

First Published Feb 29, 2024, 9:48 AM IST | Last Updated Feb 29, 2024, 9:49 AM IST

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌(Santosh Lad) ಅವರು ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಹುಟ್ಟುಹಬ್ಬ(Birthday)ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇವರು ಸಿಎಂ ಸಿದ್ದರಾಮಯ್ಯ(Siddaramaiah) ಸಚಿವ ಸಂಪುಟದಲ್ಲಿ ಯಂಗ್‌ ಅಂಡ್‌ ಎನರ್ಜಿಟಿಕ್‌ ನಾಯಕರಾಗಿದ್ದಾರೆ. ಈ ಕಾರ್ಯಕ್ರಮವನ್ನು ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಇದು ಕೇವಲ ಬರ್ತ್‌ ಡೇ ಸಂಭ್ರಮವಾಗಿರದೇ ಬುದ್ಧ, ಬಸವಣ್ಣ, ಅಂಬೇಡ್ಕರ್ ಸಂದೇಶವನ್ನ ಸಾರುವ ಅತ್ಯದ್ಭುತ ಕಾರ್ಯಕ್ರಮವಾಗಿತ್ತು. ಸಂತೋಷ್‌ ಲಾಡ್‌ರ ಹುಟ್ಟುಹಬ್ಬ ಹೊಸಪೇಟೆ ಜನರ ಕಣ್ಮನ ಸೆಳೆದಿತ್ತು.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಗುರುವಿನ ಆರಾಧನೆ ಮಾಡಿ..ಗುರುಗಳ ಅನುಗ್ರಹದಿಂದ ಕೆಲಸದಲ್ಲಿ ಜಯ!

Video Top Stories