Asianet Suvarna News Asianet Suvarna News
breaking news image

Today Horoscope: ಈ ದಿನ ಗುರುವಿನ ಆರಾಧನೆ ಮಾಡಿ..ಗುರುಗಳ ಅನುಗ್ರಹದಿಂದ ಕೆಲಸದಲ್ಲಿ ಜಯ!

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಗುರುವಾರ, ಪಂಚಮಿ ತಿಥಿ, ಚಿತ್ತಾ ನಕ್ಷತ್ರ.

ಗುರುವಾರ ಪಂಚಮಿ ತಿಥಿ ಇರುವುದರಿಂದ ಉತ್ತಮವಾದ ಕಾಲವನ್ನು ಸೂಚಿಸುತ್ತಿದೆ. ಗುರುವಿನ ಆರಾಧನೆಯನ್ನು ಇಂದು ಮಾಡಿ. ವೃಷಭ ರಾಶಿಯವರಿಗೆ ಈ ದಿನ ಅನಗತ್ಯ ವ್ಯಯವಾಗಲಿದೆ. ಶುಭಕಾರ್ಯಗಳಿಗೆ ಹಣವ್ಯಯ. ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ. ಸಹೋದರರಲ್ಲಿ ಶತ್ರುತ್ವ. ಕಾಲಿನ ಬಾಧೆ. ಕೆಲಸದಲ್ಲಿ ಅನುಕೂಲ. ಲಲಿತಾಸಹಸ್ರನಾಮ ಪಠಿಸಿ. ಮಿಥುನ ರಾಶಿಯವರಿಗೆ ಬುದ್ಧಿಬಲದ ದಿನ. ಮಾತಿನಿಂದ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಡಕು. ವಿದೇಶ ವಹಿವಾಟಿನಲ್ಲಿ ಲಾಭ. ತಂದೆ-ಮಕ್ಕಳಲ್ಲಿ ಮನಸ್ತಾಫ. ಈಶ್ವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಪುರಾತನ ನಗರ ಹೇಳಿತ್ತು ಮನುಕುಲದ ಇತಿಹಾಸ! ಪ್ರಧಾನಿ ಮೋದಿ ದ್ವಾರಕಾ ಭೇಟಿಯಿಂದ ಶುರುವಾಯ್ತು ಚರ್ಚೆ!

Video Top Stories