ನದಿಗೆ ಜಾರಿ ಬಿದ್ದ ವ್ಯಕ್ತಿ.. ಸಾವು ಬದುಕಿನ ಹೋರಾಟ..! ಪ್ರವಾಹದ ಮಧ್ಯೆ ಪ್ರಾಣ ಪಣಕ್ಕಿಟ್ಟು ರೀಲ್ಸ್ ಹುಚ್ಚಾಟ..!
ಸಾವಿನೊಂದಿಗೆ ಸರಸ.. ಪ್ರವಾಹಕ್ಕೆ ಟ್ರ್ಯಾಕ್ಟರ್ ನುಗ್ಗಿಸಿದವ ಏನಾದ..?
ಜಾನುವಾರು ಸಮೇತ ನದಿಯಲ್ಲೇ ಈಜಿ ಜಮೀನಿಗೆ ತೆರಳುವ ರೈತರು..!
ಭೀಕರ ಪ್ರವಾಹದಲ್ಲಿ ಸಿಲುಕಿದ್ದ ತಾಯಿ - ಮಗು ರಕ್ಷಣೆ ಹೇಗಾಯ್ತು..?
ಉತ್ತರದಿಂದ ದಕ್ಷಿಣದವರೆಗೆ ರಣಚಂಡಿ ಪ್ರವಾಹ(Flood) ಆರ್ಭಟಿಸ್ತಿದೆ. ಪ್ರವಾಹಾಸುರನ ಅಟ್ಟಹಾಸಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಏಕಾಏಕಿ ನುಗ್ಗಿ ಬಂದ ಪ್ರವಾಹದ ಮಧ್ಯೆ ಸಿಲುಕಿ ರಕ್ಷಣೆಗಾಗಿ ಅಂಗಲಾಚ್ತಿದ್ದಾರೆ. ದೇವಸ್ಥಾನಕ್ಕೆ (Temple) ಹೋದ ವೇಳೆಯೇ ಪ್ರವಾಹ ರೌದ್ರ ರೂಪತಾಳಿದ್ದು, ಯುವಕರು(Youths) ಮರವೇರಿ ಕುಳಿತು ಜೀವ ಉಳಿಸಿಕೊಂಡಿದ್ರು. ಅವ್ರ ರಕ್ಷಣೆಗೆ ಹೆಲಿಕ್ಯಾಪ್ಟರೇ ಬರಬೇಕಾಯ್ತು. ಮತ್ತೊಂದೆಡೆ ಕಣ್ಣೆದುರೇ ಪ್ರವಾಹದಲ್ಲಿ ಹಸುಗಳು(Cows) ಕೊಚ್ಚಿ ಹೋಗಿದ್ದು ಆ ದೃಶ್ಯವನ್ನ ನೋಡಿದ್ರೆ ಕರುಳು ಹಿಂಡಿದಂತಾಗುತ್ತೆ. ಈ ಮಧ್ಯೆ ಚಾಲಕನೊಬ್ಬ ತುಂಬಿ ಹರಿಯುತ್ತಿದ್ದ ನದಿಗೆ ಟ್ರಾಕ್ಟರ್ ನುಗ್ಗಿಸಿದ್ದಾನೆ. ಈ ಒಂದೊಂದು ದೃಶ್ಯವನ್ನ ನೋಡಿದ್ರೇನೆ ಗೊತ್ತಾಗುತ್ತೆ. ಈ ರಣಚಂಡಿ ಪ್ರವಾಹ ಅದೆಷ್ಟರ ಮಟ್ಟಿಗೆ ರೊಚ್ಚಿಗೆದ್ದಿದೆ ಅಂತ. ಮನೆ ಮುಂದೆ ರಕ್ಕರ ಪ್ರವಾಹ ರಭಸವಾಗಿ ಹರಿತಿದೆ. ರಸ್ತೆಗಳ ಮೇಲೆ ನೀರು ರಭಸವಾಗಿ ಹರಿಯುತ್ತಿದೆ.. ಊರಿಗೆ ಊರೆ ಜಲಾವೃತವಾಗಿದ್ದು, ಪ್ರವಾಹದ ಭೀಕರತೆಯನ್ನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಆಕಾಶದೆತ್ತರದ ಗುಡ್ಡಗಳು ಧರಾಶಾಹಿಯಾಗ್ತಿವೆ. ನದಿಗಳು ನಗರಗಳತ್ತ ಉಕ್ಕಿ ಬರ್ತಿವೆ. ಸಂಪರ್ಕ ಸೇತುವೆಗಳೇ ಸಂಪರ್ಕ ಕಳೆದುಕೊಂಡು, ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗ್ತಿವೆ.
ಇದನ್ನೂ ವೀಕ್ಷಿಸಿ: ಪ್ರವಾಹದ ನೀರ ಮಧ್ಯೆ ಹೆತ್ತಮ್ಮ ಮಾಡಿದ್ದೇನು..? ದೇವರೆ ಕಾಪಾಡಪ್ಪ ಅಂತ ಹೇಳಿ ಈ ಯುವಕ ಮಾಡಿದ್ದೇನು..!