ಪ್ರವಾಹದ ನೀರ ಮಧ್ಯೆ ಹೆತ್ತಮ್ಮ ಮಾಡಿದ್ದೇನು..? ದೇವರೆ ಕಾಪಾಡಪ್ಪ ಅಂತ ಹೇಳಿ ಈ ಯುವಕ ಮಾಡಿದ್ದೇನು..!

ಸಖತ್ ಇಂಟ್ರಸ್ಟಿಂಗ್ ಅಷ್ಟೇ, ಡೇರಿಂಗ್ ಎಂಡ್ ಥ್ರಿಲ್ಲಿಂಗ್ ಆಗಿರೋ ಎಪಿಸೋಡೇ ಈ ಸೂಪರ್ ಸ್ಪೆಷಲ್. ಇವತ್ತು ನಿಮ್ಮ ಮುಂದೆ, ಒಂದಿಷ್ಟು ಹಾರಿಬಲ್. ಡೆಡ್ಲಿ ಅಷ್ಟೇ ಫನ್ನಿ ವಿಡಿಯೋಗಳನ್ನ ಒಂದೊಂದಾಗಿ ಇಡ್ತಾ ಹೋಗ್ತಿದ್ದೇವೆ. ಈ ವಿಡಿಯೋಗಳನ್ನ ನೋಡಿ ನೀವು ಥ್ರಿಲ್ ಆಗೋದಂತೂ ಗ್ಯಾರಂಟಿ. 

First Published Jul 21, 2024, 8:29 AM IST | Last Updated Jul 21, 2024, 8:29 AM IST

ಧುಮ್ಮಿಕ್ಕಿ ಹರಿಯುತ್ತಿದ್ದ ಜಲಪಾತದ(Waterfall) ಕೆಳಗೆ ನಿಂತಿರುವ ಯುವಕರ (Youths) ಪರದಾಟ ಹೇಂಗಿದೆ ನೋಡಿದ್ರಾ. ಅಲ್ಲಿಂದ ಬರೋದಕ್ಕೂ ಆಗದೇ.. ಅಲ್ಲೂ ಗಟ್ಟಿಯಾಗಿ ನಿಲ್ಲೋದಕ್ಕೂ ಆಗದೇ ಒಂದೇ ಸಮನೆ ಒದ್ದಾಡ್ತಿದ್ದಾರೆ. ಮಳೆಗಾಲ (Rain season) ಬಂದರೆ ಸಾಕು, ಜನ ಬೆಟ್ಟ ಗುಡ್ಡ ಅಲೆಯೋದಕ್ಕೆ ಶುರು ಮಾಡ್ಬಿಡ್ತಾರೆ. ಪ್ರಕೃತಿ ಸೌಂದರ್ಯ ಸವಿಯುತ್ತಾ, ಜಲಪಾತದ ನೀರಲ್ಲಿ ಸ್ನಾನ ಮಾಡೋದೇ ಒಂದು ಖುಷಿ. ಇಲ್ಲೂ ಮೂವರು ಗೆಳೆಯರು ಮಳೆ ಬರ್ತಾ ಇದೆ. ಎಂಜಾಯ್ ಮಾಡೋಣ ಅಂತ ಪ್ರವಾಸಕ್ಕೆ ಹೊರಟಿದ್ದಾರೆ. ಆದರೆ ಮುಂದೆ ಆಗಿದ್ದು ಮಾತ್ರ ಅವರ ಊಹೆಗೂ ಮೀರಿದ್ದು. ಈ ಮಳೆಗಾಲದ ಸಮಯದಲ್ಲಿ ಹರಿಯುವ ನೀರಲ್ಲಿ ಇಳಿಯುವುದಾಗಲಿ ಅಥವಾ, ಜಲಪಾತದ ಕೆಳಗೆ ಹೋಗುವುದಾಗಲಿ ಮಾಡುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಆಗಾಗ ದುರಂತಗಳು ಸಂಭವಿಸುವುದನ್ನ ನಾವು ನೋಡ್ತಾನೇ ಇರ್ತೆವೆ. ಈ ಗೆಳೆಯರು ಆ ಸತ್ಯವನ್ನೇ ಮರತ್ಹೋಗಿದ್ದರು. ಜಾಲಿ ಮೂಡಲ್ಲಿ ಇದ್ದ ಇವರು, ಆ ಭಯಂಕರ ರೂಪದ ಜಲಪಾತದ ಕೆಳಗೆ ಹೋಗಿ ನಿಂತಿದ್ದಾರೆ. ನಿಲ್ಲೋದೇನೋ ಓಕೆ.. ಈ ಮೂವರಿಗೂ ಅಲ್ಲಿಂದ ಹೇಗೆ ಹೊರಗೆ ಬರಬೇಕು ಅನ್ನೊದೇ ಗೊತ್ತಾಗ್ತಿರಲಿಲ್ಲ. ಒಬ್ಬನನ್ನೇ ಹಾಗೋ ಹೀಗೋ ಸೇಫ್ ಮಾಡಿದ್ರು. ಆದರೆ ಇನ್ನಿಬ್ಬರು ಜೀವ ಭಯಕ್ಕೆ  ನಿಂತ ಜಾಗದಿಂದ ಮಿಸುಕಾಡಿರ್ಲಿಲ್ಲ. ಕೊನೆಗೆ ಅಲ್ಲಿಗೆ ಪೊಲೀಸರು ಮತ್ತು ರಕ್ಷಣಾ ತಂಡವರು. ಹಗ್ಗವನ್ನ ಕಟ್ಟಿ ಒಬ್ಬೊಬ್ಬರಾಗಿ ಅಲ್ಲಿಂದ ಸೇಫ್ ಹೊರಗೆ ತಂದಿದ್ದಾರೆ.

ಇದನ್ನೂ ವೀಕ್ಷಿಸಿ:  ಹ್ಯಾಂಡಲ್ ಮಾಡ್ತೀನೆಂದು ಜೈಲು ಸೇರುವಂತೆ ಮಾಡಿದ ಪ್ರದೋಶ್ ಮೇಲೆ ದರ್ಶನ್‌ಗಿದ್ಯಾ ಸಿಟ್ಟು?

Video Top Stories