ಅಪ್ಪು 2ನೇ ವರ್ಷದ ಪುಣ್ಯ ಸ್ಮರಣೆ: ಪುನೀತ್ ಫೇವರಿಟ್ ತಿಂಡಿಗಳನ್ನು ಅಪ್ಪನ ಮುಂದಿಟ್ಟ ಮಗಳು..!

ಪುನೀತ್ ಸಮಾಧಿ ಬಳಿ ಮುಗಿ ಬಿದ್ದ ಅಭಿಮಾನಿ ಜನಸಾಗರ
ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಡಾ.ರಾಜ್ ಕುಟುಂಬ..!
ಇಂದಿಗೂ ಕಡಿಮೆಯಾಗದ ಅಭಿಮಾನಿಗಳ ಮಹಾಪೂರ..! 

Share this Video
  • FB
  • Linkdin
  • Whatsapp


ಪವರ್ ಸ್ಟಾರ್, ಅಭಿಮಾನಿಗಳ ಪಾಲಿನ ಅಪ್ಪು.. ನಗುಮೊಗದ ರಾಜಕುಮಾರ ನಮ್ಮನ್ನೆಲ್ಲ ಅಗಲಿ ಇವತ್ತಿಗೆ 2 ವರ್ಷವಾಯ್ತು. ಇವತ್ತು ರಾಜರತ್ನನ 2ನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ಪುನೀತ್(Puneeth Rajkumar) ಸಮಾಧಿ ಇಂದು ಪುಣ್ಯ ಕ್ಷೇತ್ರವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು(Fans) ಅಪ್ಪು ಸಮಾಧಿ ದರ್ಶನಕ್ಕೆ ಬಂದಿದ್ದಾರೆ. ಅಲ್ಲದೇ ಕಂಠೀರವ ಸ್ಟುಡಿಯೋದಲ್ಲಿ(Kantheerava Studio) ದೊಡ್ಮನೆ ಕುಟುಂಬಸ್ಥರು ಅಪ್ಪು ಸ್ಮಾರಕದ ಬಳಿ ಪೂಜೆ ಸಲ್ಲಿಸಿದ್ರು. ಅಕ್ಟೋಬರ್ 29 ಕನ್ನಡಿಗರಿಗೆ ಭರಿಸಲಾಗದ ನೋವು ಕೊಟ್ಟ ದಿನ. ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದ ದಿನ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ದೂರವಾಗಿ ಇಂದಿಗೆ ಎರಡು ವರ್ಷಗಳು ಕಳೆಯುತ್ತಿದೆ. ಕರುನಾಡಿಗೆ ಅತಿಯಾಗಿ ನೋವು ಕೊಟ್ಟ ದಿನವಿದು. ಕನ್ನಡ ಸಿನಿಮಾರಂಗಕ್ಕೆ, ಕನ್ನಡದ ಸಿನಿ ಪ್ರೇಮಿಗಳಿಗೆ ತುಂಬಲಾರದ ನಷ್ಟ ಉಂಟಾದ ದಿನವಿದು. ಇದೇ ದಿನ ಪರಮಾತ್ಮ ಪುನೀತ್ ರಾಜ್ ಕುಮಾರ್ ನಮ್ಮನ್ನು ದೈಹಿಕವಾಗಿ ಅಗಲಿದ್ದು. ಆದರೆ, ಇಂದಿಗೂ ಕರುನಾಡಿನ ಮನೆ, ಮನಗಳಲ್ಲಿಯೂ ಜೀವಂತವಾಗಿದ್ದಾರೆ ನಮ್ಮ ಎವರ್ಗ್ರೀನ್ ರಾಜರತ್ನ. ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಸ್ಮಾರಕವನ್ನು ಬಿಳಿ ಮಾರ್ಬಲ್ಸ್ ನಲ್ಲಿ ನಿರ್ಮಾಣ ಮಾಡಲಾಗಿದೆ. ರಾಜ್‌ಕುಮಾರ್‌ ಅವರ ಸ್ಮಾರಕದ ಬಳಿಯೇ ಅಪ್ಪು ಸಮಾಧಿ ಇದ್ದು, ಬೆಳಗ್ಗೆಯಿಂದಲೇ ಅಭಿಮಾನಿಗಳು ದಂಡುದಂಡಾಗಿ ಆಗಮಿಸಿ ಪುನೀತ್‌ ರಾಜ್‌ಕುಮಾರ್‌ ಸಮಾಧಿಗೆ ಗೌರವ ಸಲ್ಲಿಸಿದ್ರು.

ಇದನ್ನೂ ವೀಕ್ಷಿಸಿ:  Today Horoscope: ರಾಹು-ಕೇತು ಸ್ಥಾನ ಪಲ್ಲಟ..12 ರಾಶಿಗಳ ಮೇಲೆ ಯಾವ ಪ್ರಭಾವ ಬೀರಲಿದೆ ?

Related Video