Today Horoscope: ರಾಹು-ಕೇತು ಸ್ಥಾನ ಪಲ್ಲಟ..12 ರಾಶಿಗಳ ಮೇಲೆ ಯಾವ ಪ್ರಭಾವ ಬೀರಲಿದೆ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಿತೀಯಾ ತಿಥಿ, ಕೃತ್ತಿಕಾ ನಕ್ಷತ್ರ.

ರಾಹು ಮತ್ತು ಕೇತು ಇಂದು ಸ್ಥಾನ ಪಲ್ಲಟ ಮಾಡುತ್ತಿದ್ದಾರೆ. ರಾಹು ಬುದ್ಧಿ ಭ್ರಮಣೆಯನ್ನು ಉಂಟು ಮಾಡುತ್ತಾನೆ. ಜೊತೆಗೆ ಹೃದಯ ಸಂಬಂಧಿ ರೋಗಗಳನ್ನು ತಂದುಕೊಡುತ್ತಾನೆ. ಇನ್ನೂ ಕೇತು ವಿಘ್ನಗಳನ್ನು ಸೂಚಿಸುತ್ತಾನೆ. ವಿವಾಹ ವಿಚಾರದಲ್ಲಿ ಅವನು ಸಪ್ತಮದಲ್ಲಿ ಇದ್ರೆ, ಇಬ್ಭಾಗ ಮಾಡಿ ಬಿಡುತ್ತಾನೆ. ರಾಹು ಮೀನಾ ರಾಶಿಗೆ, ಕೇತು ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. 

ಇದನ್ನೂ ವೀಕ್ಷಿಸಿ: ಧರ್ಮದ ನಾಡು ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆ!

Related Video