Asianet Suvarna News Asianet Suvarna News

ಧರ್ಮ, ಸಂಸ್ಕೃತಿ, ಆಚರಣೆ ವಿರೋಧ ಪ್ರಚಾರಕ್ಕಾ? ಸನಾತನ ಧರ್ಮ ನಾಶ ಹೇಳಿಕೆ ಬೆಂಬಲಿಸ್ತಾರಾ ಭಗವಾನ್..?

ಹಳೆಯ ಕಾಲದಿಂದ ನಡೆದುಕೊಂಡು ಬಂದಿರುವ ಕಂದಾಚಾರಗಳು ಇನ್ನೂ ನಡೆದುಕೊಂಡು ಬಂದಿವೆ ಎಂದು ಚಿಂತಕ ಕೆ.ಎಸ್. ಭಗವಾನ್ ಹೇಳುತ್ತಾರೆ.
 

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಲೇಖಕ, ಚಿಂತಕ, ಬುದ್ಧಿಜೀವಿ ಕೆ.ಎಸ್. ಭಗವಾನ್(KS Bhagawan) ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ಅವರು ಮಹಿಷ ದಸರಾ ಬಗ್ಗೆ ಮಾತನಾಡಿದ್ದು, ಮಹಿಷ(Mahisha) ರಾಕ್ಷಸ ಅಲ್ಲ ಎಂದು ಅವರು ಹೇಳಿದ್ದಾರೆ. ಮೈಸೂರಿಗೆ(Mysore) ಮೊದಲು ಮಹಿಷ ಮಂಡಲ ಎಂದು ಹೆಸರಿತ್ತು. ಮಹಿಷ ದುಷ್ಟ ಆಗಿದ್ರೆ, ಅವನ ಹೆಸರನ್ನು ಹೇಗೆ ಇಟ್ರಿ. ಹಾಗಾಗಿ ಅವನು ರಾಕ್ಷಸ ಎಂಬುದು ಸಂಪೂರ್ಣ ತಪ್ಪು ಕಲ್ಪನೆ ಎಂದು ಕೆ.ಎಸ್‌. ಭಗವಾನ್‌ ಹೇಳಿದ್ದಾರೆ. ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು ಎಂದು ಮನು ಬರೆಯುತ್ತಾನೆ. ಹಾಗಾಗಿ ಯಾರು ಜನಿವಾರ ಹಾಕುವುದಿಲ್ಲವೋ ಅವರೆಲ್ಲಾ ಶೂದ್ರರು. ಹಿಂದೂ(Hindu) ಎಂಬ ಶಬ್ಧ 10ನೇ ಶತಮಾನದ ಹಿಂದೆ ರಚನೆಯಾದ ಸಂಸ್ಕೃತದ ಯಾವ ಗ್ರಂಥದಲ್ಲೂ ಇಲ್ಲ ಎಂದು ಭಗವಾನ್‌ ಹೇಳಿದರು.   

ಇದನ್ನೂ ವೀಕ್ಷಿಸಿ:  ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಅಯೋಧ್ಯೆ ತಲುಪಿದ ಮಂಗಳೂರು ನಾಗಲಿಂಗ ಪುಷ್ಪ !