ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಅಯೋಧ್ಯೆ ತಲುಪಿದ ಮಂಗಳೂರು ನಾಗಲಿಂಗ ಪುಷ್ಪ !
ಸೆ. 5 ರಂದು 5 ಗಿಡಗಳನ್ನು ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಇದಾಗಿ ಕೆಲವು ದಿನಗಳ ಬಳಿಕ ಅಲ್ಲಿನ ಅಧಿಕಾರಿಗಳಿಂದ ದೂರವಾಣಿ ಕರೆ ಬಂದಿದ್ದು, ಗಿಡ ಸಿಕ್ಕಿದ್ದು ಗಿಡವನ್ನು ಆಯೋಧ್ಯೆಯ ರಾಮ ಮಂದಿರದ ಬದಿಯಲ್ಲಿ ನೆಡುವುದಾಗಿ ಹಾಗೂ ಬಳಿಕ ಚಿತ್ರವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದ್ದು, ದೇಶದ ಹಲವು ಭಾಗಗಳಿಂದ ಅನೇಕ ರೀತಿಯ ವಸ್ತುಗಳು ಅಯೋಧ್ಯೆಯ(Ayodhya) ಪುಣ್ಯ ಭೂಮಿಯನ್ನ ತಲುಪಿದೆ. ಈ ನಡುವೆ ಇದೇ ಮೊದಲ ಬಾರಿಗೆ ದ.ಕ ಜಿಲ್ಲೆಯಿಂದ ನಾಗಲಿಂಗ ಪುಷ್ಪ ಎನ್ನುವ ಗಿಡವೊಂದು ಅಯೋಧ್ಯೆಯ ಪುಣ್ಯ ಭೂಮಿಯನ್ನು ತಲುಪಿದ್ದು, ಶ್ರೀರಾಮನ ಮಂದಿರದ ಎದುರು ಅಲಂಕಾರಕ್ಕಾಗಿ ನೆಡಲು ರಾಮ ಜನ್ಮಭೂಮಿ ಟ್ರಸ್ಟ್ ಆಡಳಿತ ಸಿದ್ದತೆ ನಡೆಸಿದೆ. ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ನಿಡ್ಡೋಡಿ ಗ್ರಾಮದ ವಿನೇಶ್ ಪೂಜಾರಿ(Vinesh Pujari) ಎಂಬವರು ತಾವು ಬೆಳೆದ ನಾಗಲಿಂಗ ಪುಷ್ಪದ ಗಿಡವನ್ನು( Nagalinga flower plant) ಅಯೋಧ್ಯೆಗೆ ಕಳುಹಿಸಿ ಕೊಟ್ಟಿದ್ದಾರೆ. ಈ ಮೊದಲೇ ಇವರಿಗೆ ನಾಗಲಿಂಗ ಪುಷ್ಟದ ಗಿಡವನ್ನು ಅಯೋಧ್ಯೆಗೆ ಕಳುಹಿಸುವ ಉದ್ದೇಶವಿದ್ದು, ಅದರಂತೆ ಗೂಗಲ್ ಮೂಲಕ ಅಯೋಧ್ಯೆಯೆ ನಂಬರ್ ಪಡೆದು ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಅಯೋಧ್ಯ ದೇವಸ್ಥಾನ ಆಡಳಿತ ಮಂಡಳಿ ಗಿಡಗಳನ್ನು ಕಳುಹಿಸಿ ಕೊಡುವಂತೆ ಸೂಚಿಸಿದೆ.
ಇದನ್ನೂ ವೀಕ್ಷಿಸಿ: ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷಚೇತನರ ಪರದಾಟ: ಸರ್ಕಾರಿ ಸೌಲಭ್ಯ ಪಡೆಯಲು ನಿತ್ಯವೂ ಅಲೆದಾಟ