ಈ ದೇಶಕ್ಕೆ ಒಂದು ಯಂಗ್‌ ಲೀಡರ್‌ಶಿಪ್‌ ಬೇಕು, ರಾಹುಲ್‌ ಗಾಂಧಿ ಪ್ರಧಾನಿ ಆಗಲಿ: ಪ್ರದೀಪ್ ಈಶ್ವರ್‌

ಏಸ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ಮಾತನಾಡಿದ್ದು, ಅವರ ರಾಜಕೀಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಶಿಕ್ಷಣ, ಚಿಕ್ಕಬಳ್ಳಾಪುರ ಕ್ಷೇತ್ರದ ಬಗ್ಗೆಯೂ ಮಾತನಾಡಿದ್ದಾರೆ.
 

Share this Video
  • FB
  • Linkdin
  • Whatsapp

ಗೆಲ್ಲುವವನಿಗೆ ಅಖಾಡ ಯಾವುದಾದ್ರೇನು ಎಂದು ಹೇಳುವ ಮೂಲಕ ನಾನು ಪಕ್ಷದ ಅಣತಿಯಂತೆ ಚಿಕ್ಕಬಳ್ಳಾಪುರ(Chikkaballapur) ಕ್ಷೇತ್ರದಲ್ಲಿ ನಿಂತೆ ಎಂದು ಶಾಸಕ ಪ್ರದೀಪ್ ಈಶ್ವರ್‌(Pradeep Eshwar) ಹೇಳಿದ್ದಾರೆ. ಕಾಂಗ್ರೆಸ್‌(Congress) ಗ್ಯಾರಂಟಿಗಳಿಂದ(guarantee) ರಾಜ್ಯದಲ್ಲಿ ಯಾವುದೇ ಆರ್ಥಿಕ ಕ್ರೈಸಿಸ್‌ ಉಂಟಾಗುವುದಿಲ್ಲ. ಅಲ್ಲದೇ ನಮ್ಮ ಈ ಯೋಜನೆಯಿಂದ ಕಡು ಬಡವರಿಗೆ ತುಂಬಾ ಅನುಕೂಲವಾಗಲಿದೆ. ನಾವು ಯಾವಾಗಲೂ ಕಡು ಬಡವರ ಪರವಾಗಿ ಇರುತ್ತೇವೆ. ಸಿದ್ದರಾಮಯ್ಯ(Siddaramaiah) ಅವರು 13 ಬಾರಿ ಬಜೆಟ್‌ ಮಂಡಿಸಿದ್ದಾರೆ. ಈ ಯೋಜನೆಗಳಿಂದ ಅನುದಾನ ಕುಂಠಿತವಾಗುವುದಿಲ್ಲ ಎಂದು ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ. ರಾಹುಲ್‌ ಗಾಂಧಿ (Rahul ghandhi) ಪ್ರಧಾನಿ ಆಗಬೇಕು. ಕಾರಣ ದೇಶಕ್ಕೆ ಒಂದು ಯಂಗ್‌ ಲೀಡರ್‌ಶಿಪ್‌ ಬೇಕು. ರಾಜಕೀಯ ಅವರವರ ವೈಕ್ತಿಯ ಕ್ಯಾಪಸಿಟಿಯಿಂದ ನಡೆಯಬೇಕು ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

ಇದನ್ನೂ ವೀಕ್ಷಿಸಿ: ಸೌದಿಯಿಂದ ಕೊಳ್ಳೋದಲ್ಲಾ..ಮಾರಾಟ ಮಾಡುತ್ತೆ ಭಾರತ: ಉಭಯ ದೇಶಗಳ ಭವಿಷ್ಯ ಬದಲಿಸುತ್ತಾ ಆ 8 ಒಪ್ಪಂದಗಳು..?

Related Video