Asianet Suvarna News Asianet Suvarna News

ಸೌದಿಯಿಂದ ಕೊಳ್ಳೋದಲ್ಲಾ..ಮಾರಾಟ ಮಾಡುತ್ತೆ ಭಾರತ: ಉಭಯ ದೇಶಗಳ ಭವಿಷ್ಯ ಬದಲಿಸುತ್ತಾ ಆ 8 ಒಪ್ಪಂದಗಳು..?

ಸೌದಿ ಯುವರಾಜನ ಆಗಮನ, ಭಾರತಕ್ಕೆ ತಂದಿದೆ ಮಹಾಲಾಭ!
2ನೇ ಭೇಟಿ.. 2 ಮೀಟಿಂಗ್..ಹೇಗೆ ವೃದ್ಧಿಯಾಯ್ತು ಸಂಬಂಧ ?
ಪ್ರಧಾನಿ-ಸೌದಿ ಯುವರಾಜನ ಮಧ್ಯೆ ಏನೇನಾಯ್ತು ಮಾತುಕತೆ ?

ಇಡೀ ಜಗತ್ತೇ ಕೌತುಕದಿಂದ ಕಾಯ್ತಾ ಇದ್ದ ಜಿ20 ಶೃಂಗಸಭೆಯನ್ನ(G20 summit) ಅದ್ದೂರಿಯಾಗಿ ಮುಗಿಸಿಕೊಟ್ಟಿದೆ ಭಾರತ. ಇದರ ಹೊಡೆತಕ್ಕೆ, ಚೀನಾ ಪಾಕಿಸ್ತಾನದಂಥಾ ಹಿತಶತ್ರು ರಾಷ್ಟ್ರಗಳು ಥಂಡಾ ಹೊಡೆದಿದ್ದಾವೆ. ಅಷ್ಟೇ ಅಲ್ಲ, ಭಾರತ(India) ಇಟ್ಟಿರೋ ಚೆಕ್ ಮೇಟ್‌ಗೆ ಎದುರಾಳಿ ಪಾಳಯವೆಲ್ಲಾ ದಂಗಾಗಿದೆ. ಅಂಥದ್ದೊಂದು ಪಾನ್ ಮೂವ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ. ಒಂದ್ ಕಡೆ ಜಿ20 ಶೃಂಗಸಭೆ ನಡೀತಿದ್ರೆ, ಇನ್ನೊಂದು ಕಡೆ, ಪ್ರಧಾನಿ ನರೇಂದ್ರ ಮೋದಿ (Narendra Modi)ಅವರ ಚದುರಂಗ ಸಾಗಿತ್ತು. ಯಾವ್ಯಾವ ದೇಶಗಳು ಜಿ20 ಮೀಟಿಂಗ್‌ನಲ್ಲಿ ಭಾಗವಹಿಸೋದಕ್ಕೆ ಬಂದಿದ್ವೋ, ಆ ದೇಶಗಳ ಜೊತೆಗೆಲ್ಲಾ ಭಾರತ ಪ್ರತ್ಯೇಕವಾಗಿ ಮೀಟಿಂಗ್ ಮಾಡಿತ್ತು. ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಝೀಝ್ ಅಲ್ ಸೌದ್(Mohammed bin Salman). ಸೌದಿಯ ಈ ದೊರೆ ಭಾರತಕ್ಕೆ ಬಂದದ್ದು, ಬರೀ ಜಿ20 ಶೃಂಗಸಭೆಯಲ್ಲಿ ಭಾಗವಹಿಸಬೇಕು ಅಂತಷ್ಟೇ ಅಲ್ಲ. ಅದನ್ನೂ ಮೀರಿದ ಯಾವುದೋ ಉದ್ದೇಶ ಅವರಲ್ಲಿ ಸ್ಪಷ್ಟವಾಗಿತ್ತು. ಹಾಗಾಗಿನೇ, ಜಿ20 ಮುಗಿದ ಮೇಲೂ ಭಾರತದಲ್ಲೇ ವಾಸ್ತವ್ಯ ಹೂಡಿದ್ರು.. ಮೂರು ದಿನಗಳ ಕಾಲ ತಮ್ಮ ಭೇಟಿಯನ್ನ ಶುಭದಾಯಕ ಮಾಡಿಕೊಳ್ಳೋ ಪ್ರಯತ್ನ ಮಾಡಿದ್ರು.

ಇದನ್ನೂ ವೀಕ್ಷಿಸಿ:  ಪೊಲೀಸರಿಗೆ ಕ್ವಾಟ್ರಸ್‌ ಇಲ್ಲ, ಹೆಚ್‌ಆರ್‌ಎನಲ್ಲೂ ಕಡಿತ: ಸಂಕಷ್ಟದಲ್ಲಿ ಪೊಲೀಸರು !

Video Top Stories