ಸಂಸ್ಕಾರವಿಲ್ಲದ ವಿದ್ಯೆ..ಅಪ್ಪ ಅಗಲಿದರೂ ಸಂಬಂಧವೇ ಇಲ್ಲ ಎಂದ ಮಕ್ಕಳು !

ವಿದೇಶದಲ್ಲಿ ಇದ್ದ ಮಗ ಸಂಪರ್ಕಕ್ಕೆ ಸಿಗಲಿಲ್ಲ.ಮಗಳಿಗೆ ತಂದೆಯ ಸಾವಿನ ವಿಷಯ ತಿಳಿಸಿದ್ರೆ, ಶವ ಬಿಸಾಕಿ ಎಂದಿದ್ದಾಳೆ. ಬಳಿಕ ಪೊಲೀಸರೇ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
 

Share this Video
  • FB
  • Linkdin
  • Whatsapp

ಇತ್ತೀಚೆಗಷ್ಟೇ ಅರಕಲಗೂಡು ತಾಲೂಕಿನ, ಬಿಸಿಲಹಳ್ಳಿ ಗ್ರಾಮದಲ್ಲಿ ಕಲುಷಿತ ಆಹಾರ(Food) ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ದಂಪತಿ ಸಾವಿನ ರಹಸ್ಯ ಬಯಲಾಗಿದೆ. ಇವರನ್ನು ಮಗನೇ ವಿಷಹಾಕಿ ಕೊಂದಿದ್ದಾನೆ ಎಂಬ ಸಂಗತಿ ಬಳಿಕ ತಿಳಿದುಬಂದಿದೆ. ಇಂದು ಒಂದು ಘಟನೆಯಾದ್ರೆ, ಮತ್ತೊಂದು ಪ್ರಕರಣದಲ್ಲಿ ಮಹಾರಾಷ್ಟ್ರದ ಬ್ಯಾಂಕ್‌ವೊಂದರ(Bank) ನಿವೃತ್ತ ‌ಮ್ಯಾನೇಜರ್‌ ಮರಣ ಹೊಂದಿದ್ದಾರೆ. ಉದ್ಯೋಗದಲ್ಲಿದ್ದಾಗ ಹೆತ್ತ ಮಕ್ಕಳಿಗೆ ಉತ್ತಮ ‌ಶಿಕ್ಷಣ ಕೊಡಿಸಿ ಜೀವನ ರೂಪಿಸಿದಾತ. ಇಬ್ಬರೂ ಮಕ್ಕಳು ‌ವಿದೇಶದಲ್ಲಿ ಉನ್ನತ ‌ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬದುಕು ರೂಪಿಸಿಕೊಳ್ಳಲು ನೆರವಾದ ತಂದೆಯ(Father) ಆರೈಕೆ ಹೋಗಲಿ, ಅಂತ್ಯಕ್ರಿಯೆಯಿಂದಲೂ ಈ ಮಕ್ಕಳು ದೂರ ಉಳಿದಿದ್ದಾರೆ. ತಂದೆ ಸತ್ತಿರುವ ವಿಷಯ ತಿಳಿಸಿದ್ರೆ, ಅವರು ಯಾರು ಎಂದು ಗೊತ್ತಿಲ್ಲವೆಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ರಶ್ಮಿಕಾಗೆ ಭವಿಷ್ಯ ಹೇಳೋಕು ಬರುತ್ತಾ? ಅಲ್ಲೂ ಅರ್ಜುನ್ ಬಗ್ಗೆ ಅಂದೇ ಏನ್‌ ಹೇಳಿದ್ರು ಗೊತ್ತಾ ?

Related Video