ರಶ್ಮಿಕಾಗೆ ಭವಿಷ್ಯ ಹೇಳೋಕು ಬರುತ್ತಾ? ಅಲ್ಲೂ ಅರ್ಜುನ್ ಬಗ್ಗೆ ಅಂದೇ ಏನ್‌ ಹೇಳಿದ್ರು ಗೊತ್ತಾ ?

ಶ್ರೀವಲ್ಲಿಗೆ ಗೊತ್ತಿತ್ತು ಪುಷ್ಪರಾಜ್ ಗೆದ್ದೇ ಗೆಲ್ಲುತ್ತಾನಂತ
ತೆಲುಗಿನಲ್ಲಿ ಇಲ್ಲಿವರೆಗೂ ಬಂದೇ ಇರಲಿಲ್ಲ ಅವಾರ್ಡ್
ಅಲ್ಲೂ ಅರ್ಜುನ್‌ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ

Share this Video
  • FB
  • Linkdin
  • Whatsapp

ನಟ ಅಲ್ಲೂ ಅರ್ಜುನ್‌ಗೆ ನ್ಯಾಷನಲ್‌ ಅವಾರ್ಡ್ ಬರುತ್ತೆ ಅಂತ ರಶ್ಮಿಕಾಗೆ(Rashmika Mandanna) ಅವತ್ತೆ ಗೊತ್ತಿತ್ತಾ? ರಶ್ಮಿಕಾ ಭವಿಷ್ಯ ಹೇಳೋಕು ಬರುತ್ತಾ? ಹೀಗಂತ ರಶ್ಮಿಕಾ ಅವತ್ತಿನ ಈ ವಿಡಿಯೋ (Video) ನೋಡಿ ಜನ ಕಮೆಂಟ್ ಮಾಡುತ್ತಿದ್ದಾರೆ. ಪುಷ್ಪ(Pushpa) ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಅಂದೇ ಶ್ರೀವಲ್ಲಿ ರಶ್ಮಿಕಾ ಅಲ್ಲೂ ಅರ್ಜುನ್(Allu Arjun) ಪುಷ್ಪ ಸಿನಿಮಾದ ನಟನೆಗೆ ಕಳೆದೆ ಹೋಗಿದ್ದರು. ಅಲ್ಲೂ ಅರ್ಜುನ್ ಪುಷ್ಪ ಪಾತ್ರಕ್ಕಾಗಿ ಎಷ್ಟೆಲ್ಲಾ ಶ್ರಮ ಹಾಕಿದ್ದರು ಎನ್ನುವುದನ್ನು ಹತ್ತಿರದಿಂದ ನೋಡಿದ್ದ ರಶ್ಮಿಕಾ. ಪುಷ್ಪ ಪಾತ್ರದ ನಟನೆಗೆ ಅಲ್ಲೂ ಅರ್ಜುನ್ ಅವರಿಗೆ ನ್ಯಾಷನಲ್ ಅವಾರ್ಡ್ ಏನು ಎಲ್ಲಾ ಅವಾರ್ಡ್‌ಗಳೂ ಬಂದುಬಿಡುತ್ತೆ ಅಂತ ನನಗೆ ಅನಿಸುತ್ತೆ. ಅಷ್ಟೊಂದು ಅದ್ಭುತವಾಗಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಅಂದು ಪುಷ್ಪ ರಿಲೀಸ್‌ಗೂ ಮೊದಲೇ ಹೇಳಿದ್ದರು. ಆ ಮಾತು ಇದೀಗ ನಿಜವಾಗಿದೆ. ರಶ್ಮಿಕಾ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ: ಮತ್ತೊಂದು ಪ್ರೇಮ ಪ್ರಣಯಕ್ಕೆ ರೆಡಿ ಸ್ಯಾಂಡಲ್‌ವುಡ್: ಸ್ಪೇಷಲ್ ಫೋಟೋ ಶೂಟ್‌ನಲ್ಲಿ 'ಸಂಜು ವೆಡ್ಸ್ ಗೀತಾ 2'

Related Video